ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಶ್ವೇತಭವನ ಸಮಾರಂಭಕ್ಕೆ ಬೆಂಗಳೂರಿನ ಯುವಕ
ಬೆಂಗಳೂರು, ಗುರುವಾರ, 8 ಜನವರಿ 2009   ( 16:58 IST )
ಅಮೆರಿಕದಲ್ಲಿ ಬದಲಾವಣೆಯ ಹೊಸ ಅಲೆಗಾಗಿ ಇಡೀ ಜಗತ್ತು ಕಾದಿರುವ ನಡುವೆ, ಜನವರಿ 20ರಂದು ಯುವಕ ಬೆಂಗಳೂರಿನ ರಾವಲ್ ಮೆನನ್ ಸ್ಮರಣೀಯ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ. ಜಗತ್ತಿನ ನಾಳಿನ ನೀತಿಗಳನ್ನು ರೂಪಿಸುವ ಪುರುಷರು ಮತ್ತು ಮಹಿಳೆಯರ ಜಾಲದಲ್ಲಿ ಈ ಬೆಂಗಳೂರಿಗ ಸೇರಲಿದ್ದು, 'ಚೇಂಜ್, ವಿ ಕ್ಯಾನ್' ಪ್ರಚಾರ ಹೇಳಿಕೆ ನೀಡಿದ ವ್ಯಕ್ತಿಯ ಕೈಕುಲುಕಲಿದ್ದಾರೆ.

ರಾವಲ್ ತಮ್ಮ ವಯಸ್ಸಿನ ಯುವಕರಂತೆ ಕನಸು ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಉತ್ಸಾಹಶೀಲರಾಗಿದ್ದಾರೆ. ಅವರು ಅಮೆರಿಕದ 56ನೇ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ, ಜಗತ್ತಿನ ಪುಟಗಳಲ್ಲಿ ಇತಿಹಾಸ ದಾಖಲಾಗುವುದನ್ನು ಕಾಣಲಿದ್ದು, ತಮ್ಮ ಜೀವನದ ನೆನಪಿನ ಪುಟಗಳಲ್ಲಿ ಸಹ ಅದನ್ನು ಬರೆದಿಡಲಿದ್ದಾರೆ.

ಬೆಂಗಳೂರಿಗೆ ರಜಾದಿನ ಕಳೆಯಲು ಆಗಮಿಸಿರುವ ರಾವಲ್ ಲಾಸ್ ಏಂಜಲ್ಸ್ ಆಕ್ಸಿಡೆಂಟಲ್ ಕಾಲೇಜಿನಲ್ಲಿ ಓದುವಾಗ ದ್ವೈವಾರ್ಷಿಕ ಜಾಗತಿ ಯುವನಾಯಕರ ಸಮಾವೇಶದಲ್ಲಿ ಭಾಗವಹಿಸಲು ಅವರನ್ನು ಆಯ್ಕೆ ಮಾಡಲಾಯಿತು. ವಾಡಿಕೆಯಂತೆ ತಮ್ಮ ದೇಶವನ್ನು ಹೊರತುಪಡಿಸಿ ಬೇರೆ ರಾಷ್ಟ್ರವನ್ನು ಅವರು ಪ್ರತಿನಿಧಿಸಬೇಕಿತ್ತು. ಅವರು ವೆನೆಜುವೆಲಾದ ರಾಜತಾಂತ್ರಿಕರಾಗಿ ಸಮಾವೇಶದಲ್ಲಿ ಭಾಗವಹಿಸಿದರು.

130 ರಾಷ್ಟ್ರಗಳ ಪೈಕಿ ವೆನೆಜುವೆಲಾಗೆ ಎರಡನೇ ಸ್ಥಾನ ಗಳಿಸಿತು.ಅದಕ್ಕೆ ಪ್ರತಿಫಲವಾಗಿ ಸಿಕ್ಕಿದ್ದು ಜನವರಿ 20ರಂದು ಶ್ವೇತಭವನದ ಅಧ್ಯಕ್ಷರ ಪ್ರಮಾಣವಚನ ಸಮಾರಂಭಕ್ಕೆ ಆಮಂತ್ರಣ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಒಗ್ಗಟ್ಟಿನ ಕೊರತೆಯೇ ಪಕ್ಷದ ಸೋಲಿಗೆ ಕಾರಣ
ಸತ್ಯಂ ಹಗರಣ ಐಟಿ ಕಂಪೆನಿಗಳಿಗೆ ಎಚ್ಚರಿಕೆ: ಮ‌ೂರ್ತಿ
ಸಚಿವರ ವಸತಿ ಭತ್ಯೆಯಲ್ಲಿ ಏರಿಕೆ
ಮುಷ್ಕರ ಎದುರಿಸಲು ಕೇಂದ್ರದಿಂದ ಸೂಚನೆ
ಕಾಂಗ್ರೆಸ್ಸಿನಿಂದ ಪ್ರತಿಭಾನ್ವೇಷಣೆ ಕಾರ್ಯಕ್ರಮ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...