ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಸಚಿವರ ವಸತಿ ಭತ್ಯೆಯಲ್ಲಿ ಏರಿಕೆ
ಬೆಂಗಳೂರು, ಗುರುವಾರ, 8 ಜನವರಿ 2009   ( 12:12 IST )
ಸಚಿವರ ಸವಲತ್ತುಗಳಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೊಸ ವರ್ಷದ ಉಡುಗೊರೆಯಾಗಿ ಸಚಿವರ ವಸತಿ ಬಾಡಿಗೆ ಭತ್ಯೆಯನ್ನು ಮಾಸಿಕ 40 ಸಾವಿರದಿಂದ 50 ಸಾವಿರಕ್ಕೇರಿಸಲು ನಿರ್ಧರಿಸಲಾಗಿದೆ.

ಭೂಮಿ ಕಟ್ಟಡ ಮತ್ತು ನಿರ್ವಹಣೆಯ ಖರ್ಚು ಏರಿರುವುದರಿಂದ ವಸತಿ ಬಾಡಿಗೆ ಭತ್ಯೆಯನ್ನು ಶೇ 20 ರಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 5 ಸಾವಿರವಿದ್ದ ನಿರ್ವಹಣಾ ಶುಲ್ಕವನ್ನು ಈಗ ಹತ್ತು ಸಾವಿರಕ್ಕೇರಿಸಲಾಗಿದೆ.

ವಸತಿ ಭತ್ಯೆ ಹೆಚ್ಚಳ ಜಾರಿಗೆ ತರಲು ಕರ್ನಾಟಕ ಸಚಿವರ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ-2008ನ್ನು ರೂಪಿಸಲಾಗಿದೆ. ಜನವರಿ 16ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು.

ಸರ್ಕಾರಿ ಬಂಗಲೆಯಲ್ಲಿ ವಾಸಿಸುವ ಸಚಿವರು ವಸತಿ ಭತ್ಯೆಯನ್ನು ತೆಗೆದುಕೊಳ್ಳುವಂತಿಲ್ಲ. ಮುಖ್ಯಮಂತ್ರಿ ಸೇರಿದಂತೆ 18 ಸಚಿವರಿಗೆ ಸರ್ಕಾರಿ ವಸತಿ ನೀಡಲಾಗಿದೆ. ಉಳಿದವರು ಸ್ವಂತ ಮನೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಮೂವರು ಬಂಗಲೆಗಳನ್ನು ಸಚಿವರಿಗಾಗಿ ಮೀಸಲಿಡಲಾಗಿದೆ. ಸಚಿವರಿಗೆ ಸರ್ಕಾರಿ ವಸತಿ ನೀಡದೇ ಇದ್ದರೆ, ಅವರು ಲೋಕೋಪಯೋಗಿ ಇಲಾಖೆ ಅನುಮತಿ ಮೇರೆಗೆ ಮನೆ ಬಾಡಿಗೆಗೆ ಪಡೆಯಬಹುದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಷ್ಕರ ಎದುರಿಸಲು ಕೇಂದ್ರದಿಂದ ಸೂಚನೆ
ಕಾಂಗ್ರೆಸ್ಸಿನಿಂದ ಪ್ರತಿಭಾನ್ವೇಷಣೆ ಕಾರ್ಯಕ್ರಮ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ಅಜಿತ್ ದೊವಾಲ್ ಆಂತರಿಕ ಸಲಹೆಗಾರ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...