ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಬೆಂಗಳೂರು, 7 ಜನವರಿ 2009   ( 20:15 IST )
ಉಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ವೈಯಕ್ತಿಕ ವರ್ಚಸ್ಸೇ ಕಾರಣ ಎಂದು ತೋಟಗಾರಿಕ ಸಚಿವ ಉಮೇಶ್ ಕತ್ತಿ ಹೇಳಿದ್ದಲ್ಲದೇ, ಆರು ತಿಂಗಳಲ್ಲಿ ಜೆಡಿಎಸ್ ಉತ್ತರ ಕರ್ನಾಟಕದಿಂದ ಗಂಟು ಮ‌ೂಟೆ ಕಟ್ಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇಲ್ಲಿಯವರೆಗೆ 7 ವಿಧಾನಸಭೆ ಚುನಾವಣೆ ಎದುರಿಸಿದ್ದೇನೆ. ಒಮ್ಮೆ ಮಾತ್ರ 421 ಮತಗಳಿಂದ ಸೋಲು ಅನುಭವಿಸಿದ್ದೇನೆ. ಐದು ಬಾರಿ ಬೇರೆ ಬೇರೆ ಚಿಹ್ನೆಯಡಿ ಸ್ಪರ್ಧಿಸಿದ್ದೇನೆ ಎಂದರು. ಜನರೊಂದಿಗೆ ತಾವು ಹೊಂದಿರುವ ಸಂಪರ್ಕ ಮತ್ತು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮ ಗೆಲುವಿಗೆ ಕಾರಣ. ಯಡಿಯೂರಪ್ಪ ನಾಯಕತ್ವ ಕೂಡಾ ಸಹಕಾರಿಯಾಗಿದೆ. ಇದೆಲ್ಲಕ್ಕಿಂತ ವೈಯಕ್ತಿಕ ವರ್ಚಸ್ಸು ಗೆಲುವು ತಂದು ಕೊಟ್ಟಿದೆ ಎಂಬುದನ್ನು ಅನೇಕ ಚುನಾವಣೆಗಳು ಸಾಬೀತು ಪಡಿಸಿವೆ. ಎ.ಬಿ.ಪಾಟೀಲ್ ಸೇರಿದಂತೆ ತಮ್ಮ ವಿರುದ್ಧ ಸ್ಪರ್ಧಿಸಿದ್ದರೂ ಗೆಲುವಿನ ಅಂತರ 50 ಸಾವಿರಕ್ಕಿಂತ ಕಡಿಮೆ ಇರುತ್ತಿರಲಿಲ್ಲ ಎಂದರು.

ಎಂಟು ಕ್ಷೇತ್ರಗಳ ಪೈಕಿ ಅನುಕಂಪ, ಹಣ, ಹೆಂಡದಿಂದ ಜೆಡಿಎಸ್ ಮೂರು ಕ್ಷೇತ್ರ ಗೆದ್ದಿದೆ. ಉತ್ತರ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ಠೇವಣಿ ಜಪ್ತಿಯಾಗಿ ಉತ್ತರ ಕರ್ನಾಟಕದಿಂದ ಅಪ್ಪ, ಮಕ್ಕಳು ಗಂಟು ಮೂಟೆ ಕಟ್ಟಿದ್ದಾರೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದಿಂದಲೇ ಜೆಡಿಎಸ್ ಮಾಯವಾಗುತ್ತದೆ. ಅದಕ್ಕಾಗಿ ತಮ್ಮೊಂದಿಗೆ ಮೈತ್ರಿಕೊಳ್ಳಲಿ ಎಂದು ಅಪ್ಪ-ಮಕ್ಕಳು ಕಾಂಗ್ರೆಸ್‌‌ಗೆ ಬೆದರಿಕೆ ಹಾಕುತ್ತಿರುತ್ತಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 25 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ. ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಪರೋಕ್ಷ ನೆರವು ನೀಡಿದ್ದಾರೆ ಎಂಬುದು ಸರಿಯಲ್ಲ ಎಂದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ಅಜಿತ್ ದೊವಾಲ್ ಆಂತರಿಕ ಸಲಹೆಗಾರ
ಸರ್ಕಾರದ ವಿರುದ್ಧ ರೈತ ಸಂಘ ಸಮರಕ್ಕೆ ಸಜ್ಜು
ಕಾನೂನು ಆಯೋಗ ರಚನೆ
ಆರ್.ವಿ.ದೇವರಾಜ್ ಸೇರಿ ಅನೇಕರ ಮನೆಗೆ ಐಟಿ ದಾಳಿ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...