ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗುಲ್ಬರ್ಗಾ, 7 ಜನವರಿ 2009   ( 20:12 IST )
ನಿಮ್ಮನ್ನೆಲ್ಲಾ ನೊಡಿ 'ನನಾ'ಗೆ ಅನಂದವಾಗಿದೆ. ನಿಮಗೆ ಹೊಸ 'ವರ್ಷಾ'ದ ಶುಭಾಶಯಗಳು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕನ್ನಡದಲ್ಲಿ ನುಡಿದಾಗ ಸಭೆಯಲ್ಲಿ ಕರತಾಡನದೊಂದಿಗೆ ಹರ್ಷ ವ್ಯಕ್ತವಾಗಿತ್ತು. ಬಳಿಕ ಹಿಂದಿಯಲ್ಲಿ ತಮ್ಮ ಮಾತನ್ನು ಮುಂದುವರಿಸಿದ ಅವರು, ದೇಶಕ್ಕೆ ಬುದ್ಧನ ಶಾಂತಿ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಶಾಂತಿ-ಸೌಹಾರ್ದತೆಯಿಂದ ಬಾಳಬೇಕಾಗಿದೆ ಎಂದು ಹೇಳಿದರು.

ಅವರು ಸಂತರ ನಾಡಾದ ಗುಲ್ಬರ್ಗಾದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬುದ್ಧ ವಿಹಾರವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

ಏಷ್ಯಾ ಖಂಡದಲ್ಲೇ ಅತ್ಯಂತ ಬೃಹದಾಕಾರದ ಬೌದ್ಧ ವಿಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಹಾರವನ್ನು ಇಂದು ಬೆಳಿಗ್ಗೆ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಸುಮಾರು 400ಕೆಜಿ ಪಂಚಲೋಹದ ಬುದ್ದ ವಿಗ್ರಹವನ್ನು ಪ್ರತಿಭಾ ಪಾಟೀಲ್ ಅವರು ಅನಾವರಣಗೊಳಿಸಿದರು.

ಸಂಪೂರ್ಣ ಅಮೃತಶಿಲೆಯಿಂದ ಕಂಗೊಳಿಸುತ್ತಿರುವ ಬುದ್ಧ ವಿಹಾರವನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ನಿಂದ ನಿರ್ಮಾಣ ಮಾಡಲಾಗಿತ್ತು.

ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯ‌ೂರಪ್ಪ, ರಾಜ್ಯಪಾಲ ರಾಮೇಶ್ವರ ಠಾಕೂರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್,ಕಾಂಗ್ರೆಸ್ ಮುಖಂಡ ಧರಂಸಿಂಗ್, ಕೆಪಿಸಿಸಿ ಮಾಜಿ ಅಧ್ಯಕ್ಷ, ಸಿದ್ದಾರ್ಥ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಲಕ್ಷ್ಣಣ ಸವದಿ, ಇಕ್ಬಾಲ್ ಅಹ್ಮದ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಲ್ಲಿಕಾರ್ಜುನ ಖರ್ಗೆಯವರು ಸನ್ಮಾನಿಸಿದರು.ಬಿಗಿ ಭದ್ರತೆ: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇರಿದಂತೆ ಗಣ್ಯಾತೀಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ 2-3ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ನಿಷೇಧಿಸಲಾಗಿದ್ದು, ನಗರದ ಅರ್ಧಭಾಗ ಸಂಚಾರವಿಲ್ಲದೆ ಬರೇ ಪೊಲೀಸರ ಸರ್ಪಗಾವಲು ಹಾಕಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ಅಜಿತ್ ದೊವಾಲ್ ಆಂತರಿಕ ಸಲಹೆಗಾರ
ಸರ್ಕಾರದ ವಿರುದ್ಧ ರೈತ ಸಂಘ ಸಮರಕ್ಕೆ ಸಜ್ಜು
ಕಾನೂನು ಆಯೋಗ ರಚನೆ
ಆರ್.ವಿ.ದೇವರಾಜ್ ಸೇರಿ ಅನೇಕರ ಮನೆಗೆ ಐಟಿ ದಾಳಿ
ಪ್ರ.ಕಾರ್ಯದರ್ಶಿ ಹುದ್ದೆ ರದ್ದಿಗೆ ನೌಕರರ ಆಗ್ರಹ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...