|
| ಆರ್.ವಿ.ದೇವರಾಜ್ ಸೇರಿ ಅನೇಕರ ಮನೆಗೆ ಐಟಿ ದಾಳಿ |
| ಬೆಂಗಳೂರು, 7 ಜನವರಿ 2009 ( 13:25 IST ) | |
ಮಾಜಿ ಶಾಸಕ ಆರ್.ವಿ.ದೇವರಾಜ್ ಸೇರಿದಂತೆ ನಗರದ ಪ್ರಮುಖ ರಾಜಕಾರಣಿಗಳ ಮನೆ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಹಠಾತ್ ದಾಳಿ ನಡೆಸಿದ್ದಾರೆ.
ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ ಎದುರು ಇರುವ ದೇವರಾಜ್ ಅವರ ಮನೆ, ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿರುವ ಮಲ್ಲಿಕಾರ್ಜುನ ಹಾಗೂ ಅವರ ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿದೆ.
ದೇವರಾಜ್ ನಿವಾಸದ ಮೇಲೆ ಸಂಜೆ 6 ಗಂಟೆ ಸುಮಾರಿಗೆ ದಾಳಿ ನಡೆದಿದೆ. ಜತೆಗೆ ಚಾಮರಾಜಪೇಟೆಯಲ್ಲಿರುವ ಬೆಂಬಲಿಗರಾದ ಲೋಕಿ ಅಲಿಯಾಸ್ ಲೋಕೇಶ್ವರ, ಪೂರ್ಣಿ, ನರಸಿಂಹ ಮೂರ್ತಿ, ಪ್ರಭು, ಗೋವಿಂದೇಗೌಡ ಸೇರಿದಂತೆ ಹತ್ತು ಜನರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ದಾಖಲೆ ಪತ್ರಗಳು, ಚಿನ್ನಾಭರಣ ಹಾಗೂ ನಗದು ದೊರೆತಿದೆ. ಪ್ರಭು ಎಂಬುವರಿಗೆ ಸೇರಿದ ಸುಮಾರು 20 ಮನೆಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಮಲ್ಲಿಕಾರ್ಜುನ ಅವರ ಸಹಚರರಾದ ರಮೇಶ್, ಬಸವರಾಜ್ ಎಂಬುವರ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಶಾಸಕರ ಭವನದ ಸಮೀಪದ ಹೈ ಪಾಯಿಂಟ್ ಬಳಿ ಮಲ್ಲಿಕಾರ್ಜುನ ಹೊಂದಿದ್ದ ಕಚೇರಿ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|