|
| ಚಿತ್ರ ನಿರ್ಮಾಪಕನ ಮೇಲೆ ಹಲ್ಲೆ |
| ಬೆಂಗಳೂರು, 7 ಜನವರಿ 2009 ( 13:16 IST ) | |
ಕಾರಿಗೆ ಡಿಕ್ಕಿ ಹೊಡೆದ ನೆಪದಲ್ಲಿ ಚಲನಚಿತ್ರ ನಿರ್ಮಾಪಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಂಗಳವಾರ ಹೆಣ್ಣೂರು ಮುಖ್ಯರಸ್ತೆಯಲ್ಲಿ ನಡೆದಿದೆ. ವಿಜಯನಗರದ ಸುಮುಖ್ ಟ್ರಾವೆಲ್ಸ್ ಮಾಲೀಕ ಹಾಗೂ ಹಾಲಿಡೇಸ್ ಎಂಬ ಕನ್ನಡ ಚಿತ್ರ ನಿರ್ಮಿಸುತ್ತಿರುವ ಸಂತೋಷ್ ಕುಮಾರ್ ಗಾಯಗೊಂಡವರು.
ತಲೆ, ಬೆನ್ನಿಗೆ ತೀವ್ರ ಸ್ವರೂಪದ ಗಾಯವಾಗಿರುವ ಸಂತೋಷ್ ಈಗ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್ ಹೆಣ್ಣೂರು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಹೊರಮಾವು ಕಡೆ ಹೋಗಲು ತಿರುವು ಪಡೆಯಲು ಕಾರು ನಿಧಾನವಾಯಿತು. ಈ ಸಮಯದಲ್ಲಿ ಹಿಂದೆ ಬರುತ್ತಿದ್ದ ಮಾರುತಿ ಜೆನ್ ಸಂತೋಷ್ ಕಾರಿಗೆ ಡಿಕ್ಕಿ ಹೊಡೆದು ದೊಡ್ಡ ಘರ್ಷಣೆಗೆ ಕಾರಣವಾಯಿತು.
ಮಾರುತಿ ಕಾರು ಡಿಕ್ಕಿ ಹೊಡೆದಿದ್ದರಿಂದ ಹೊಸ ಹುಂಡೈ ಕಾರಿನ ಹಿಂಭಾಗ ಜಖಂಗೊಂಡಿತು. ಕೂಡಲೇ ಕೆಳಗಿಳಿದ ನಿರ್ಮಾಪಕ ಕಾರಿನ ಚಾಲಕನನ್ನು 'ನೋಡ್ಕೊಂಡ್ ಡ್ರೈವ್ ಮಾಡಕ್ಕಾಗಲ್ವ'ಎಂದು ಗದರಿದರು. ಆಗ ಜೆನ್ ಕಾರಿನ ಚಾಲಕ ಕ್ಷಮೆಯಾಚಿಸಿದ.
ಇದರಿಂದ ತೃಪ್ತರಾಗದ ಸಂತೋಷ್ ಮತ್ತೆ ಅವನ ಮೇಲೆ ರೇಗುತ್ತಿದ್ದಾಗ ಜೆನ್ ಕಾರಿನಿಂದ ಇಳಿದ ಒಬ್ಬಾತ ಲಾಂಗ್ ತೆಗೆದು ಇವರ ತಲೆ ಹಾಗೂ ಬೆನ್ನಿನ ಮೇಲೆ ಹಲ್ಲೆ ನಡೆಸಿದ. ಕೈಯಿಂದ ತಡೆಯಲು ಪ್ರಯತ್ನಿಸಿದಾಗ ಮೊಣಕೈಗೆ ಗಾಯಗಳಾಗಿವೆ.
ಜೆನ್ ಕಾರು ಡಿಕ್ಕಿ ಹೊಡೆದ ಸಮಯದಲ್ಲಿ ಸಂತೋಷ್ ಚಿತ್ರದ ನಿರ್ದೇಶಕ ಹರಿಪ್ರಸಾದ್ ಎಂಬುವರ ಜೊತೆ ಚಿತ್ರದ ಚಿತ್ರೀಕರಣದ ವಿಚಾರವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|