ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಬೆಂಗಳೂರು, 5 ಜನವರಿ 2009   ( 19:17 IST )
ಬಿಎಂಐಸಿ ಯೋಜನೆಯಲ್ಲಿನ ಅವ್ಯವಹಾರ ಬಯಲಾಗುವ ಭೀತಿಯಿಂದ ಮುಖ್ಯಮಂತ್ರಿ ಯಡಿಯ‌ೂರಪ್ಪ ಅವರು ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರವನ್ನು ಕೈಬಿಟ್ಟಿದ್ದಾರೆಂದು ಗಂಭೀರವಾಗಿ ಆರೋಪಿಸಿರುವ ಮಾಜಿ ಪ್ರಧಾನಿ ದೇವೇಗೌಡ, ತಾಕತ್ತಿದ್ದರೆ ಅವರು ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲೆಸೆದಿದ್ದಾರೆ.

ನೈಸ್ ಯೋಜನೆಯಲ್ಲಿ ಅಶೋಕ್ ಖೇಣಿ ಹಾಗೂ ಯಡಿಯೂರಪ್ಪ ಅವರು 30ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಗೌಡರು ದೂರಿದ್ದರು. ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಗುಟುರು ಹಾಕಿತ್ತು.

ಏತನ್ಮಧ್ಯೆ ಹೊಸ ವರ್ಷದಂದು ಮಾಜಿ ಪ್ರಧಾನಿ ದೇವೇಗೌಡರಿಗೆ ನೂತನ ವರ್ಷದ ಗಿಫ್ಟ್ ಎಂಬಂತೆ, ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೌಡರಿಗೆ ಜನರೇ ತಕ್ಕ ಉತ್ತರ ನೀಡಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಯಡಿಯೂರಪ್ಪ ಸಮಜಾಯಿಷಿ ನೀಡಿದ್ದರು.

ಆದರೆ ಇದೀಗ ಮಾನನಷ್ಟ ಮೊಕದ್ದಮೆ ನಿರ್ಧಾರದಿಂದ ಹಿಂದೆ ಸರಿದಿರುವ ಯಡಿಯೂರಪ್ಪ ಅವರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗೌಡರು, ಇದು ಮುಖ್ಯಮಂತ್ರಿಗಳ ಪಲಾಯನವಾದ ಎಂದು ಟೀಕಿಸಿದ್ದಲ್ಲದೇ, ಮಾನನಷ್ಟ ಮೊಕದ್ದಮೆ ಹೂಡಲಿ ಎಂಬುದಾಗಿಯೂ ತಿರುಗೇಟು ನೀಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಾಂಗ್ರೆಸ್ ಸಭೆಗೆ 'ಕೈ' ಕೊಟ್ಟ ಸಿದ್ದರಾಮಯ್ಯ
ಡೀಸೆಲ್ ದರ ವಿವಾದ: ರಾಷ್ಟ್ರವ್ಯಾಪಿ ಟ್ರಕ್ ಮುಷ್ಕರ
ಐಟಿ ಸಂಸ್ಥೆಗಳಿಗೆ ಈ ಮೇಲ್ ಬೆದರಿಕೆ: ಕಟ್ಟೆಚ್ಚರ
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಬಾಲಕನ ಪತ್ತೆಗಾಗಿ ಆಂಧ್ರಕ್ಕೆ ಪೊಲೀಸರು
ಅಂಗನವಾಡಿ ಕಾರ್ಯಕರ್ತರ ಧರಣಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...