|
| ಡೀಸೆಲ್ ದರ ವಿವಾದ: ರಾಷ್ಟ್ರವ್ಯಾಪಿ ಟ್ರಕ್ ಮುಷ್ಕರ |
| ಬೆಂಗಳೂರು, 5 ಜನವರಿ 2009 ( 16:21 IST ) | |
ಭಾನುವಾರ ಮಧ್ಯರಾತ್ರಿಯಿಂದ ಅಖಿಲ ಭಾರತ ಮೋಟಾರ್ ಸಾರಿಗೆ ಸಂಘಟನೆ ಕರೆನೀಡಿರುವ ರಾಷ್ಟ್ರವ್ಯಾಪಿ ಅನಿರ್ದಿಷ್ಟ ಮುಷ್ಕರದ ಭಾಗವಾಗಿ ಸುಮಾರು 3.6 ಲಕ್ಷ ಟ್ರಕ್‌ಗಳು ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಗತ್ಯಸಾಮಗ್ರಿಗಳ ಸರಬರಾಜಿಗೆ ಅಡ್ಡಿಯಾಗಲಿದೆ.
ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದರೂ ಡೀಸೆಲ್ ದರ ಕಡಿಮೆ ಮಾಡಲು ಸರ್ಕಾರದ ನಿರಾಕರಣೆ ಮತ್ತು ಟಾಲ್ ತೆರಿಗೆ, ಸೇವಾ ತೆರಿಗೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ವಾಹನಮಾಲೀಕರು ಮುಷ್ಕರಕ್ಕೆ ನಿರ್ಧರಿಸಿದ್ದಾರೆಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಶಣ್ಮುಖಪ್ಪ ತಿಳಿಸಿದ್ದಾರೆ.
ತೈಲಟ್ಯಾಂಕರ್‌ಗಳು ರಸ್ತೆಗೆ ಇಳಿಯದಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ. ಆದಾಗ್ಯೂ, ಹಾಲು ಮತ್ತು ತರಕಾರಿ ಸಾಗಣೆಯ ಲಾರಿಗಳ ಸಂಚಾರಕ್ಕೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ. ತೈಲ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ 40 ಡಾಲರ್‌ಗಿಂತ ಕಡಿಮೆಯಾಗಿದ್ದರೂ ಡೀಸೆಲ್ ದರ ಕಡಿಮೆಮಾಡಿಲ್ಲದಿರುವುದು ಲಾರಿಗಳ ಮುಷ್ಕರಕ್ಕೆ ಕಾರಣವಾಗಿದೆ.
ಪ್ರಸಕ್ತ ದರಗಳಲ್ಲಿ ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 22 ರೂ.ಗೆ ನಿಗದಿ ಮಾಡಲಾಗಿದೆ. ಆದರೆ ಸರ್ಕಾರ ಅದೇ ದರಗಳಲ್ಲಿ ಡೀಸೆಲ್ ಮಾರಾಟ ಮುಂದುವರಿಸಿದ್ದು, ಇದರಿಂದಾಗಿ ಸಾರಿಗೆ ಮಾಲೀಕರ ಜೇಬುಗಳಿಗೆ ಕತ್ತರಿ ಬಿದ್ದಿದೆ ಎಂದು ಶಣ್ಮುಗಪ್ಪ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|