|
| ಕಾಳಸಂತೆಯಲ್ಲಿ ಸಿಲಿಂಡರ್ ವ್ಯಾಪಾರ |
| ಬೆಂಗಳೂರು, 5 ಜನವರಿ 2009 ( 13:28 IST ) | |
ಅಡುಗೆ ಅನಿಲ ಟ್ಯಾಂಕರ್‌ಗಳ ಮುಷ್ಕರವನ್ನು ಕೆಲವು ಎಲ್‌ಪಿಜಿ ಗ್ಯಾಸ್ ಏಜೆನ್ಸಿಗಳು ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ. ನಗರದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕಾಳಸಂತೆ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ.
ಕೆಲ ಗ್ಯಾಸ್ ಏಜೆನ್ಸಿಗಳು ಹಿಂದಿನ ಬಾಗಿಲಿನ ಮೂಲಕ ದುಪ್ಪಟ್ಟು ಹಣ ನೀಡುವವರಿಗೆ ಗ್ಯಾಸ್ ಪೂರೈಕೆ ಮಾಡುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಮುಷ್ಕರ ನಡೆಯುವುದಕ್ಕಿಂತ ಮೊದಲು ಅಡುಗೆ ಅನಿಲ ಉದ್ಯಮದಲ್ಲಿ ಕಾಳಸಂತೆ ವ್ಯಾಪಾರ ನಡೆಯುತಿತ್ತು. ಆದರೆ ಈಗ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ದುಪ್ಪಟ್ಟಾಗಿದೆ.
14.2 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್‌ಗೆ ಕಾಳಸಂತೆಯಲ್ಲಿ 600ರಿಂದ 650 ರೂ. ಬೆಲೆಯಿದೆ. ಕಾಳಸಂತೆಯಲ್ಲಿ ಎಷ್ಟು ಬೆಲೆ ತೆತ್ತಾದರೂ ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಮುಂದಾಗುವವರು ಹೊಟೇಲು ಮಾಲೀಕರು. ಈ ಹಿಂದೆಯೂ ಹೊಟೇಲು ಮಾಲೀಕರು ವಾಣಿಜ್ಯ ಸಿಲಿಂಡರ್‌ಗಳಿಗಿಂತ ಗೃಹಬಳಕೆ ಅಡುಗೆ ಅನಿಲವನ್ನೇ ಕೊಳ್ಳುತ್ತಿದ್ದರು.
ಗೃಹ ಬಳಕೆ ಅಡುಗೆ ಅನಿಲ 14.2 ಕೆ.ಜಿ.ಸಿಲಿಂಡರ್‌ಗೆ 380 ರೂ. ಆದರೆ 16 ಕಿಲೋ ವಾಣಿಜ್ಯ ಬಳಕೆ ಸಿಲಿಂಡರ್‌ಗೆ 900 ರೂ. ಈಗ 600 ರಿಂದ 650 ರೂ. ಕೊಟ್ಟು ಗೃಹಬಳಕೆ ಅಡುಗೆ ಅನಿಲ ಖರೀದಿಸಿದರೂ ಅವರಿಗೆ ನಷ್ಟವೇನೂ ಆಗುವುದಿಲ್ಲ. ಆದರೆ ವ್ಯಾಪಾರದಿಂದಾಗಿ ಜನಸಾಮಾನ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಡಿ.31ರ ಮಧ್ಯರಾತ್ರಿಯಿಂದ ಆರಂಭವಾದ ಮುಷ್ಕರದಿಂದಾಗಿ ಗೃಹ ಬಳಕೆ ಅನಿಲ ಪೂರೈಕೆ ಸ್ಥಗಿತಗೊಂಡಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|