ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಮುಂಬೈ ದಾಳಿಗೆ ಮಲ್ಪೆ ಬೋಟ್ ಖರೀದಿ ಯತ್ನ
ಮಂಗಳೂರು, ಭಾನುವಾರ, 4 ಜನವರಿ 2009   ( 12:49 IST )
ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಜಾಡು ಹಿಡಿದಿರುವ ಪೊಲೀಸರಿಗೆ ಇದೀಗ ಅನೇಕ ಮಹತ್ವದ ಮಾಹಿತಿಗಳು ಲಭ್ಯವಾಗಿದೆ. ಪೊಲೀಸರಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಭಟ್ಕಳದ ರಿಯಾಜ್ ಮುಂಬೈ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಮುಂಬೈಗೆ ಉಗ್ರರನ್ನು ಕರೆದೊಯ್ಯಲು ಮಲ್ಪೆಯಲ್ಲಿ ಬೋಟ್ ಖರೀದಿಸಲು ರಿಯಾಜ್ ಯತ್ನಿಸಿದ್ದ ಎನ್ನಲಾಗಿದ್ದು, ಇದರಲ್ಲಿ ನಾಲ್ವರು ಉಗ್ರರೂ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಬೋಟ್ ಮಾಲೀಕರೊಂದಿಗೆ ಚರ್ಚೆ ಕೂಡ ನಡೆಸಿದ್ದರು. ಈ ಸಂದರ್ಭದಲ್ಲಿ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದರೂ, ಇವರಿಂದ ಮುಂಬೈ ಸ್ಫೋಟದ ಕುರಿತು ಯಾವುದೇ ಮಾಹಿತಿ ದೊರೆತಿರಲಿಲ್ಲ. ಒಂದು ವೇಳೆ ಆ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದರೆ, ಮುಂಬೈ ಸ್ಫೋಟವನ್ನು ತಪ್ಪಿಸಬಹುದಾಗಿತ್ತು.

ನಂ.26ರಂದು ನಡೆದ ಮುಂಬೈ ಸ್ಫೋಟಕ್ಕೆ ರಿಯಾಜ್ ಹಾಗೂ ಆತನ ಸಹೋದರ ಅಗಸ್ಟ್‌ನಲ್ಲೇ ಸ್ಕೆಚ್ ರೂಪಿಸಿದ್ದರು. ಇದಕ್ಕೆ ಸಹಕಾರಿಯಾಗಿದ್ದ ಶಂಕಿತ ಉಗ್ರರಾದ ಅಹಮ್ಮದ್ ಬಾವಾ ಮತ್ತು ಸಯ್ಯದ್ ನೌಷಾದ್ ಅಕ್ಬೋಬರ್ 4ರಂದು ಸೂರತ್ ಬಾಂಬ್ ಸ್ಫೋಟದ ಬಳಿಕ ಚಿಕ್ಕಮಗಳೂರಿನಲ್ಲಿ ಉಗ್ರರ ತರಬೇತಿ ಕೇಂದ್ರಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಇದೀಗ ಈ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಸೂರತ್ ಪೋಲಿಸರಿಗೆ ಒಪ್ಪಿಸಲಾಗಿದೆ.

ಯೋಜನೆ ರೂಪಿಸಿರುವಂತೆ ಮಂಗಳೂರಿನಿಂದ ಬೋಟ್ ಮೂಲಕ ಶಸ್ತ್ರಾಸ್ತ್ರಗಳನ್ನು ಮುಂಬೈ ಸ್ಫೋಟಕ್ಕೆ ಸುಲಭವಾಗಿ ಸಾಗಿಸುವುದು ರಿಯಾಜ್ ಉದ್ದೇಶವಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಮಂಗಳೂರಿನಿಂದ ಪುಣೆಗೆ ತೆರಳುತ್ತಿದ್ದ ರಿಯಾಜ್ ಸ್ನೇಹಿತರಾದ ಚೌಧುರಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅಹಮ್ಮದ್ ಬಾವಾ ಸೇರಿದಂತೆ ಇತರ ನಾಲ್ವರನ್ನು ಬಂಧಿಸಿದ್ದರಿಂದ ಈ ಯೋಜನೆಗೆ ಅಡ್ಡಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೊಂದಾಣಿಕೆ: ಮುಖ್ಯಮಂತ್ರಿ
ಬಿಜೆಪಿಯಿಂದ ಜೆಡಿಎಸ್ ಶಾಸಕರ ಕಡೆಗಣನೆ
ಶಾಲೆಗಳಲ್ಲಿ ದೈಹಿಕ ಶಿಕ್ಷಣ ಕಡ್ಡಾಯ
ಮುಷ್ಕರನಿರತ ವೈದ್ಯರಿಗೆ 4 ದಿನಗಳ ವೇತನ ಕಡಿತ
ಬೆಂಗಳೂರಿನಲ್ಲಿ 100 ಮಹಡಿಗಳ ಗಗನಚುಂಬಿ ಕಟ್ಟಡ
ಕನ್ನಡ ನಾಮಫಲಕ ಅಳವಡಿಕೆ: ಒಂದು ವಾರ ಗಡುವು
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...