|
| ಮುಷ್ಕರನಿರತ ವೈದ್ಯರಿಗೆ 4 ದಿನಗಳ ವೇತನ ಕಡಿತ |
| ಬೆಂಗಳೂರು, ಶನಿವಾರ, 3 ಜನವರಿ 2009 ( 14:21 IST ) | |
ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿ ರೋಗಿಗಳು ಪರದಾಡುವಂತೆ ಮಾಡಿದ ಸುಮಾರು 35,000 ಸರ್ಕಾರಿ ವೈದ್ಯರುಗಳಿಗೆ ನಾಲ್ಕುದಿನಗಳ ವೇತನ ಕಡಿತಕ್ಕೆ ಸರ್ಕಾರ ನಿರ್ಧರಿಸಿದೆ. ಆರೋಗ್ಯ ಇಲಾಖೆಯು 10ರಿಂದ 13ರವರೆಗೆ ವೇತನರಹಿತ ಅವಧಿಯೆಂದು ಪರಿಗಣಿಸಿದ್ದು, ಪ್ರತಿವೈದ್ಯರಿಗೆ 2000ದಿಂದ 3000 ರೂ.ವರೆಗೆ ಸಂಬಳ ಕಡಿತ ಮಾಡಿದೆ.
ಇದೇ ರೀತಿ ಪ್ರತಿಭಟನೆಯನ್ನು ಇನ್ನು ಮೇಲೆ ನಡೆಸದಂತೆ ಸರ್ಕಾರ ಎಚ್ಚರಿಕೆ ಕೂಡ ನೀಡಿದೆ. ಹೈಕೋರ್ಟ್‌ಗೆ ಕ್ರಮ ಕೈಗೊಂಡ ವರದಿಯನ್ನು ಕೂಡ ಸರ್ಕಾರ ಸಲ್ಲಿಸಲಿದೆ.
ಸರ್ಕಾರ ತಮ್ಮ ಬೇಡಿಕೆ ಈಡೇರಿಕೆಗೆ ಭರವಸೆ ನೀಡಿರುವುದರಿಂದ ಸರ್ಕಾರದ ಕ್ರಮದಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಕರ್ನಾಟಕ ಸರ್ಕಾರ ವೈದ್ಯಕೀಯ ಅಧಿಕಾರಿಗಳ ಸಂಘಟನೆ ಅಧ್ಯಕ್ಷ ಟಿ.ಸತ್ಯನಾರಾಯಣ ತಿಳಿಸಿದ್ದಾರೆ. ವೈದ್ಯರ ಮುಷ್ಕರದ ವಿರುದ್ಧ ಹೈಕೋರ್ಟ್ ತೀವ್ರವಾಗಿ ಖಂಡಿಸಿ, ಈ ವಿಷಯದ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರ ಮತ್ತು ವೈದ್ಯಕೀಯ ಮಂಡಳಿಗೆ ಸೂಚಿಸಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|