|
| `ಲಾಲು ಸಂಬಂಧಿ' ಸೋಗಿನಲ್ಲಿ ವಂಚನೆ |
| ಬೆಂಗಳೂರು, 23 ಡಿಸೆಂಬರ್ 2008 ( 19:27 IST ) | |
ನಾನು ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಅವರ ಸಂಬಂಧಿ, ರೈಲ್ವೆಯಲ್ಲಿ ಆಯ್ಕೆ ಮಂಡಳಿಯ ಸದಸ್ಯೆ ಎಂದು ಹೇಳಿಕೊಂಡು ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಮಹಿಳೆಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ನಗರದ ಕಿರ್ಲೋಸ್ಕರ್ ಕಾಲೊನಿ ಮೂರನೇ ಹಂತದ ನಿವಾಸಿ ಎ.ಪ್ರೇಮಾ (46) ಬಂಧಿತ ವಂಚಕಿ. ಈಕೆಯ ಬಂಧನದೊಂದಿಗೆ ಕರ್ನಾಟಕವಲ್ಲದೆ ಕೇರಳ ಮತ್ತು ತಮಿಳುನಾಡುಗಳಲ್ಲೂ ಇದೇ ರೀತಿ ವಂಚಿಸುತ್ತಿರುವ ಜಾಲ ಬೆಳಕಿಗೆ ಬಂದಂತಾಗಿದೆ.
ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಈವರೆಗೆ 25ರಿಂದ 30 ಮಂದಿಗೆ ಆಸೆ ಹುಟ್ಟಿಸಿ ಸುಮಾರು 30 ಲಕ್ಷ ರೂಗಳನ್ನು ವಂಚನೆ ಮಾಡಿದ್ದಾಳೆ ಎಂದು ಅಂದಾಜಿಸಲಾಗಿದೆ. ರೈಲ್ವೇ ಇಲಾಖೆಯಲ್ಲಿ ಟಿಟಿ, ಪ್ರಥಮ ದರ್ಜೆ ಸಹಾಯಕ ಹಾಗೂ ಇತರೆ ಹುದ್ದೆಗಳನ್ನು ಕೊಡಿಸಲು ಈಕೆ ನಿರುದ್ಯೋಗಿಗಳನ್ನು ಹುಡುಕುತ್ತಿದ್ದಳು ಎನ್ನಲಾಗಿದೆ.
ಹಿನ್ನೆಲೆ: ಈಕೆಯಿಂದ ವಂಚನೆಗೊಳಗಾದ ಮಾಗಡಿ ರಸ್ತೆಯ ಈಶ್ವರಿ ಎಂಜಿನಿಯರಿಂಗ್ ವರ್ಕ್ಸ್ ಎಸ್.ಯುವರಾಜ್ (34) ಎಂಬುವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವರಾಜ್ ಪತ್ನಿ ಮೇಘನಾ ಅವರಿಗೆ ರೈಲ್ವೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುವುದಾಗಿ 1.30 ಲಕ್ಷ ರೂ.ಗಳನ್ನು ಪಡೆದಿದ್ದಳು.
ಇದಕ್ಕೆ ಗ್ಯಾರಂಟಿಯಾಗಿ ಐಸಿಐಸಿಐ ಬ್ಯಾಂಕ್‌ನ 60 ಮತ್ತು 70 ಸಾವಿರ ರೂ.ಗಳ ಚೆಕ್ ಬರೆದುಕೊಟ್ಟು ಅಪಾಯಿಂಟ್‌ಮೆಂಟ್ ಆರ್ಡರ್ ಕೈಗೆ ಬಂದ ಮೇಲೆ ಚೆಕ್‌ಗಳನ್ನು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಳು. ಆದರೆ ನಂತರ ನಾಪತ್ತೆಯಾದ ಈಕೆ ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದಳು ಎನ್ನಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಶಂಕರ್ ನಾಗ್ ನೆನಪು ಮತ್ತೆ ಮತ್ತೆ ಕಾಡುತ್ತಿದ್ದೆ. ಇದೀಗ ಹಿರಿಯ ನಟ ಶ್ರೀನಿವಾಸ್ ಪ್ರಭು ಮತ್ತೆ ನೆನಪಿಸುತ್ತಾರೆ. ಶಂಕರ್ ಇದ್ದಿದ್ರೆ ನಮ್ಮೆನ್ನೆಲ್ಲಾ ಸುಮ್ಮನಿರಲು ಬಿಡುತ್ತಿರಲಿಲ್ಲ. ಸದಾ ಚಟುವಟಿಕೆಯಿಂದಿರುತ್ತಿದ್ದವನು |
| |
|
|
|
|
|
|
|