|
| `ಗಣಿ ಅಕ್ರಮ ಆರೋಪಿಗಳಿಗೆ ದಾಕ್ಷಿಣ್ಯ ಇಲ್ಲ' |
| ಬೆಂಗಳೂರು, 23 ಡಿಸೆಂಬರ್ 2008 ( 19:10 IST ) | |
ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಆರೋಪಿಗಾಗಿರುವ ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ನಾನು ಯಾರಿಗೂ ದಾಕ್ಷಿಣ್ಯ ತೋರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ದೇವದುರ್ಗ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಪರ ಪ್ರಚಾರಕ್ಕೆಂದು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಲೋಕಾಯುಕ್ತರು ನೀಡಿದ ತನಿಖಾ ವರದಿಯೇ ಅಂತಿಮವಾಗಿದೆ. ಈ ವರದಿಯಲ್ಲಿ ತಪ್ಪಿತಸ್ಥರೆಂದು ಗುರುತಿಸಿದ ವ್ಯಕ್ತಿಗಳು ಎಂತಹ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಕಾನೂನು ಕ್ರಮ ತೆಗೆದುಕೊಳ್ಳಲು ವಿಳಂಬವಾದರೆ 3 ತಿಂಗಳ ನಂತರ ರಾಜಭವನಕ್ಕೆ ತೆರಳಬೇಕಾಗುತ್ತದೆ ಎಂಬ ರಾಜ್ಯ ಲೋಕಾಯುಕ್ತ ಸಂತೋಷ್ ಹೆಗಡೆ ಅವರ ಎಚ್ಚರಿಕೆ ಮಾತಿನ ಕುರಿತು ಕೇಳಿದಾಗ ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದೇ ಇಲ್ಲ. ಅವರಾಧಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಉತ್ತರಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಶಂಕರ್ ನಾಗ್ ನೆನಪು ಮತ್ತೆ ಮತ್ತೆ ಕಾಡುತ್ತಿದ್ದೆ. ಇದೀಗ ಹಿರಿಯ ನಟ ಶ್ರೀನಿವಾಸ್ ಪ್ರಭು ಮತ್ತೆ ನೆನಪಿಸುತ್ತಾರೆ. ಶಂಕರ್ ಇದ್ದಿದ್ರೆ ನಮ್ಮೆನ್ನೆಲ್ಲಾ ಸುಮ್ಮನಿರಲು ಬಿಡುತ್ತಿರಲಿಲ್ಲ. ಸದಾ ಚಟುವಟಿಕೆಯಿಂದಿರುತ್ತಿದ್ದವನು |
| |
|
|
|
|
|
|
|