|
| ನಾಡಗೀತೆಗೆ ಅಗೌರವ: ಸಿಎಂ ಕ್ಷಮೆಯಾಚನೆ |
| ಬೆಂಗಳೂರು, ಬುಧವಾರ, 3 ಡಿಸೆಂಬರ್ 2008 ( 13:49 IST ) | |
ಪೊಲಿಸ್ ತರಬೇತಿ ಮಹಾ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಬ್ಯಾಂಡ್ ವೃಂದದವರು ನುಡಿಸಿದ ನಾಡಗೀತೆಗೆ ಯಾರೊಬ್ಬರೂ ಎದ್ದು ನಿಲ್ಲದೇ ಅಗೌರವ ತೋರಿದ್ದಾರೆ. ಆದರೆ ಇದು ವೇದಿಕೆಯಲ್ಲಿದ್ದ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ಬಂದು ತಕ್ಷಣ ಘಟನೆಗೆ ಕ್ಷಮೆ ಕೋರಿ ಮತ್ತೊಮ್ಮೆ ಪೊಲೀಸ್ ಬ್ಯಾಂಡ್ ನುಡಿಸಲು ಸೂಚಿಸಿದರಲ್ಲದೇ ಎದ್ದು ನಿಂತು ಗೌರವ ಸೂಚಿಸುವಂತೆ ಕೇಳಿಕೊಂಡರು.
ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಪೆರೇಡ್ ಸಂದರ್ಭದಲ್ಲಿ ಪೊಲೀಸ್ ವಾದ್ಯವೃಂದ ನುಡಿಸುವ ನಾಡಗೀತೆಗೆ ಎದ್ದು ನಿಂತು ಗೌರವ ಸೂಚಿಸುವುದು ಕ್ರಮ. ಆದರೆ ಯಾರೊಬ್ಬರು ಎದ್ದು ನಿಂತು ನಾಡಗೀತೆಗೆ ಗೌರವ ಸೂಚಿಸಲಿಲ್ಲ.
ವೇದಿಕೆಯಲ್ಲಾದ ಈ ಘಟನೆ ಕೆಲವು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದ ಅಂಶ ವೇದಿಕೆ ಮೇಲಿದ್ದ ಸಿಎಂ ಗಮನಕ್ಕೆ ಬಂದು, ತಕ್ಷಣ ಅವರು ಕ್ಷಮೆಯಾಚಿಸಿ, ಸಮಾರಂಭದ ಸಂಘಟಕರು ನಾಡಗೀತೆ ನುಡಿಸುವಾಗ ಸಾರ್ವಜನಿಕರಿಗೆ ಎದ್ದುನಿಲ್ಲುವಂತೆ ಸೂಚನೆ ನೀಡಬೇಕು. ಇಲ್ಲದೇ ಹೋದಲ್ಲಿ ಇಂತಹ ಅನಾಹುತಗಳು ನಡೆಯುತ್ತವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|