ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಉನ್ನಿಕೃಷ್ಣನ್ ವರ್ತನೆ ಹಿಂದೆ ರಾಜಕೀಯ ವಾಸನೆ: ಸಿಪಿಎಂ
ಬೆಂಗಳೂರು, ಬುಧವಾರ, 3 ಡಿಸೆಂಬರ್ 2008   ( 13:43 IST )
ಮುಂಬೈ ಘಟನೆಯಲ್ಲಿ ಬಲಿಯಾದ ಮೇಜರ್ ಸಂದೀಪ್ ಅವರ ಮನೆಗೆ ಕೇರಳ ಮುಖ್ಯಮಂತ್ರಿ ತೆರಳಿದಾಗ ಹುತಾತ್ಮ ಸಂದೀಪ್ ತಂದೆ ಉನ್ನಿಕೃಷ್ಣನ್ ವರ್ತನೆಯ ಹಿಂದೆ ರಾಜಕೀಯ ವಾಸನೆ ಇದೆ ಎಂಬ ಅನುಮಾನಗಳಿವೆ ಎಂದು ಸಿಪಿಎಂ ಗಂಭೀರ ಆರೋಪ ಮಾಡಿದೆ.

ಮಿಲಿಟರಿಯಲ್ಲಿ ಸೇವೆ ಸಲ್ಲಿಸುವವರು ಈ ರೀತಿ ವರ್ತನೆ ಮಾಡುತ್ತಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಇಂತಹ ಘಟನೆಗಳಲ್ಲಿ ವೀರಯೋಧರು ಬಲಿಯಾದಾಗ ಎಲ್ಲರೂ ಹೋಗಿ ಸಾಂತ್ವನ ಹೇಳುವುದು ಸಾಮಾನ್ಯ ಎಂದು ಪಕ್ಷದ ಕಾರ್ಯದರ್ಶಿ ವಿ.ಜೆ.ನಾಯರ್ ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿಗಳು ಬರುವುದಾಗಿ ದೂರವಾಣಿಯಲ್ಲಿ ತಿಳಿಸಿದಾಗ ಮೊದಲು ಒಪ್ಪಿದ್ದಾರೆ. ನಂತರ ಬೇಡವೆಂದರು. ಅವರ ವರ್ತನೆಯೇ ವಿಚಿತ್ರವಾಗಿದೆ ಎಂದರು.

ಮನೆಗೆ ಬಂದಾಗ ಈ ರೀತಿಯ ನಡವಳಿಕೆ ತೋರುವುದು ಸರಿಯಲ್ಲ. ಅವರು ವೀರ ಯೋಧರಾಗಿ ದೇಶಕ್ಕಾಗಿ ಬಲಿಯಾಗಿರುತ್ತಾರೆ ಎಂಬ ಕಾರಣಕ್ಕಾಗಿಯೇ ಹೋಗಲಾಗುತ್ತದೆ. ಇಂತಹ ಯೋಧರು ಮೃತರಾದಾಗ ಶತ್ರು ರಾಷ್ಟ್ರದ ಸೇನಾನಿ ಬಂದರೂ ಅವರನ್ನು ಸ್ವಾಗತಿಸಬೇಕಾಗುತ್ತದೆ. ಮುಖ್ಯಮಂತ್ರಿಯವರು ನಾಯಿ ಎಂದಿದ್ದೂ ಸರಿಯಲ್ಲ ಎಂದರು.

ಕೇರಳ ಮುಖ್ಯಮಂತ್ರಿಯವರ ಹೇಳಿಕೆಯನ್ನು ಖಂಡಿಸಿ ನಾವು ಈಗಾಗಲೇ ಪತ್ರಿಕಾ ಹೇಳಿಕೆ ನೀಡಿದ್ದೇವೆ ಎಂದು ಪಕ್ಷದ ಸಮಿತಿ ಸದಸ್ಯ ಜಿ.ಎನ್.ನಾಗರಾಜ್ ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಸ್ತಮಾ ಬಾಧೆ: ಟೆಕಿ ಆತ್ಮಹತ್ಯೆ
ನಾನು ರಾಜಕಾರಣಿ ವಿರೋಧಿಯಲ್ಲ: ಉನ್ನಿಕೃಷ್ಣನ್
ಹುತಾತ್ಮರಿಗೆ ಹೋಟೆಲುಗಳ ಸಂಘ ಶ್ರದ್ದಾಂಜಲಿ
ಉಗ್ರರ ವಿರುದ್ಧ ಒಗ್ಗಟ್ಟಾಗಿ ಹೋರಾಟ: ಸರ್ವಪಕ್ಷಗಳ ನಿರ್ಣಯ
ಸೋನಿಯಾಗೆ ರಾಷ್ಟ್ರ ಪ್ರೇಮವಿಲ್ಲ: ಬಚ್ಚೇಗೌಡ ವಾಗ್ದಾಳಿ
ಭಯೋತ್ಪಾದನೆ ಹೆಸರಿನಲ್ಲಿ ರಾಜಕೀಯ ಸಲ್ಲ: ಸಿದ್ದು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...