|
| ಆಸ್ತಮಾ ಬಾಧೆ: ಟೆಕಿ ಆತ್ಮಹತ್ಯೆ |
| ಬೆಂಗಳೂರು, 3 ಡಿಸೆಂಬರ್ 2008 ( 13:38 IST ) | |
ಆಸ್ತಮಾ ಕಾಯಿಲೆ ತೀವ್ರತೆ ತಾಳಲಾಗದೆ ಉತ್ತರ ಪ್ರದೇಶ ಮೂಲದ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಎಚ್ಎಸ್ಆರ್ ಬಡವಾಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೀನಾಂಕ (25) ಸಾವಿಗೆ ಶರಣಾದ ದುರ್ದೈವಿ. ಇವರ ಪತಿ ಪ್ರವೀಣ್ ಕೂಡಾ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.
ಮೀನಾಂಕ ಬಿಟಿಎಂ ಬಡವಾಣೆಯ ಮೊದಲನೇ ಹಂತದ ಬಿಪಿಓ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಕೂಡಾ ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೀನಾಂಕ ಹಾಗೂ ಪ್ರವೀಣ್ ಮದುವೆಯಾಗಿ ಮಂಗಳವಾರಕ್ಕೆ 1 ವರ್ಷ ಆಗಿತ್ತು. ಇದನ್ನು ಆಚರಿಸಲು ಸಿದ್ಧತೆ ಮಾಡುತ್ತಿದ್ದರು. ಆದರೆ ಮೀನಾಂಕ ಅವರನ್ನು ಆಸ್ತಮಾ ಕಾಯಿಲೆ ತೀವ್ರವಾಗಿ ಬಾಧಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಪತಿ ಪ್ರವೀಣ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಬಾಗಿಲು ತೆರೆಯಲಿಲ್ಲ. ಆದರೆ ಪ್ರವೀಣ್ ಪತ್ನಿ ಸುಮ್ಮನೆ ಕಾಡಿಸುತ್ತಿರಬಹುದು ಎಂದು ಮನೆಯ ಹೊರಗೆ ಕುಳಿತರು. ಆದರೆ ರಾತ್ರಿ ಹನ್ನೆರಡಾದರೂ ಬಾಗಿಲು ತೆರೆಯದ್ದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ಮೀನಾಂಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಸ್ತಮಾವನ್ನು ತಡೆಯಲಾಗುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರ ಬರೆದಿಟ್ಟಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|