ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ನಾನು ರಾಜಕಾರಣಿ ವಿರೋಧಿಯಲ್ಲ: ಉನ್ನಿಕೃಷ್ಣನ್
ಬೆಂಗಳೂರು, ಮಂಗಳವಾರ, 2 ಡಿಸೆಂಬರ್ 2008   ( 16:15 IST )
ರಾಜಕಾರಣಿಗಳ ವಿರುದ್ಧ ತಮಗೆ ಯಾವುದೇ ಧ್ವೇಷವಿಲ್ಲ. ನಾನು ರಾಜಕಾರಣಿಗಳ ವಿರೋಧಿಯಲ್ಲ. ರಾಜಕಾರಣಿಗಳು ಪ್ರಜಾಪ್ರಭುತ್ವದ ಭಾಗವಷ್ಟೇ ಎಂದು ಮುಂಬಯಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಅವರ ತಂದೆ ಉನ್ನಿಕೃಷ್ಣನ್ ಅವರ ಮಾತು.

ಕೇರಳ ಸಿಎಂ ವಿ.ಎಸ್. ಅಚ್ಯತಾನಂದನ್ ಮತ್ತು ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಲು ನಿರಾಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಮಾಧ್ಯಮಗಳ ವರದಿ ಗಮನಿಸಿ ಸಚಿವರು ಆಗಮಿಸಿದರು. ಯಾರದೋ ಒತ್ತಾಯದ ಮೇರೆಗೆ ಸಾಂತ್ವನ ಹೇಳಲು ಬರುವುದು ನನಗಿಷ್ಟವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ದೇಶ ಸಂಕಷ್ಟದಲ್ಲಿದೆ. ನನ್ನ ಪ್ರತಿಕ್ರಿಯೆಯನ್ನು ತಪ್ಪಾಗಿ ಅರ್ಥೈಸಿವುದಾಗಲಿ, ವಿಪರೀತ ಅರ್ಥ ಕಲ್ಪಿಸುವುದಾಗಲಿ ನನಗಿಷ್ಟವಿಲ್ಲ. ರಾಜಕಾರಣಿಗಳು ರಾಜೀನಾಮೆ ನೀಡುತ್ತಿದ್ದಾರೆ. ಆದರೆ ನನ್ನ ಟೀಕೆ ಅದ್ಯಾವುದಕ್ಕೂ ಸಂಬಂಧಿಸಿದ್ದಲ್ಲ. ಸಹಜವಾದ ಸಾಂತ್ವನವನ್ನು ನಿರೀಕ್ಷಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಕೇರಳದ ಸಚಿವರು ಐದಾರು ಬಾರಿ ದೂರವಾಣಿ ಕರೆ ಮಾಡಿಸಿದರೂ ಉನ್ನಿಕೃಷ್ಣನ್ ಪ್ರತಿಕ್ರಿಯಿಸಲಿಲ್ಲ. ಸಿಎಂ ಮತ್ತು ಸಚಿವರು ನೇರವಾಗಿ ಮನೆಗೆ ಬಂದಾಗಲೂ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹುತಾತ್ಮರಿಗೆ ಹೋಟೆಲುಗಳ ಸಂಘ ಶ್ರದ್ದಾಂಜಲಿ
ಉಗ್ರರ ವಿರುದ್ಧ ಒಗ್ಗಟ್ಟಾಗಿ ಹೋರಾಟ: ಸರ್ವಪಕ್ಷಗಳ ನಿರ್ಣಯ
ಸೋನಿಯಾಗೆ ರಾಷ್ಟ್ರ ಪ್ರೇಮವಿಲ್ಲ: ಬಚ್ಚೇಗೌಡ ವಾಗ್ದಾಳಿ
ಭಯೋತ್ಪಾದನೆ ಹೆಸರಿನಲ್ಲಿ ರಾಜಕೀಯ ಸಲ್ಲ: ಸಿದ್ದು
ಕ್ರೀಡಾ ಸಂಕೀರ್ಣ ಸ್ಥಾಪನೆಗೆ ಸರ್ಕಾರ ಚಿಂತನೆ: ಲಿಂಬಾವಳಿ
ಲೋಕಸಭಾ ಚುನಾವಣೆ: ಬಿಜೆಪಿ ಪಟ್ಟಿ ಪೂರ್ಣ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...