|
| ಡಿ.5: ಹಾಲು ಉತ್ಪಾದಕರ ರ‌್ಯಾಲಿ |
| ಬೆಂಗಳೂರು, ಸೋಮವಾರ, 1 ಡಿಸೆಂಬರ್ 2008 ( 16:14 IST ) | |
ಸಹಕಾರಿ ಸಂಘಗಳಿಗೆ ಹಾಲು ಪೂರೈಸುತ್ತಿರುವ ರೈತರಿಗೆ ಮಾತ್ರವೇ ಪ್ರೋತ್ಸಾಹ ಧನ ನೀಡುತ್ತಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಿ.5ರಂದು ನಗರದ ಗಾಂಧಿ ಪ್ರತಿಮೆ ಎದುರು ಹಾಲು ಉತ್ಪಾದಕ ರೈತರ ಬೃಹತ್ ರ‌್ಯಾಲಿ ಹಮ್ಮಿಕೊಂಡಿದೆ.
ರ‌್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಲು ಉತ್ಪಾದಿಸುವ 10 ಸಾವಿರ ರೈತರು ಭಾಗವಹಿಸಲಿದ್ದು, ಮಲ್ಲೇಶ್ವರ ಆಟದ ಮೈದಾನದಿಂದ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಹಾಲು ಉತ್ಪಾದಿಸುವ ರೈತರಿಗೆ ಪ್ರತಿ ಲೀ.2 ರೂ. ಪ್ರೋತ್ಸಾಹಧನ ನೀಡುವ ಸರಕಾರದ ಉದ್ದೇಶ ಸ್ವಾಗತಾರ್ಹ. ಆದರೆ ಈ ನೀತಿ ಕೆಲವೇ ರೈತರ ಪರವಾಗಿದ್ದು, ಉಳಿದ ರೈತರನ್ನು ನಿರ್ಲಕ್ಷಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಈ ಪ್ರೋತ್ಸಾಹ ಧನ ರಾಜ್ಯದ ಕೆಲವೇ ಜಿಲ್ಲೆಗಳ ರೈತರ ಕೈ ಸೇರಿದೆ. ರಾಜ್ಯದಲ್ಲಿ ಪ್ರತಿ ದಿನ 113 ಲಕ್ಷ ಲೀ. ಹಾಲು ಉತ್ಪಾದಿಸಲಾಗುತ್ತಿದ್ದು, ಇದರಲ್ಲಿ ಕೇವಲ 30 ಲಕ್ಷ ಲೀ.ಹಾಲು ಮಾತ್ರ ಪ್ರತಿ ದಿನ ಸಹಕಾರಿ ಸಂಘಗಳ ಮೂಲಕ ಶೇಖರಣೆ ಆಗುತ್ತಿದೆ ಎಂದರು.
ಕೇವಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರಿಗೆ ಸೇರಿದ ಹಸು ಮತ್ತು ಕೆಎಂಎಫ್ ಸಂಸ್ಥೆಗಳನ್ನು ಪೋಷಿಸುವಂತಹ ಹಾಲಿನ ರಾಜಕೀಯ ಬೇಡ. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|