ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ರಾಜಕಾರಣಿಗಳಿಗೆ ಪ್ರವೇಶವಿಲ್ಲ: ಉನ್ನಿಕೃಷ್ಣನ್ ತಂದೆ
ಬೆಂಗಳೂರು, ಸೋಮವಾರ, 1 ಡಿಸೆಂಬರ್ 2008   ( 12:56 IST )
ಮುಂಬೈಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಉನ್ನಿಕೃಷ್ಣನ್ ಕೋಪಿಸಿಕೊಂಡಿದ್ದರು. ರಾಜಕಾರಣಿಗಳು ಸಾಂತ್ವನ ಹೇಳಲು ಅವರ ಮನೆಗೆ ಬರುತ್ತಿರುವುದೇ ಅವರ ಕೋಪಕ್ಕೆ ಕಾರಣವಾಗಿತ್ತು.

ಸುದೀಪ್ ವೀರಮರಣ ಅಪ್ಪಿದ ಬಳಿಕ ಇಸ್ರೋ ಲೇಔಟ್ ಅವರ ನಿವಾಸಕ್ಕೆ ರಾಜಕಾರಣಿಗಳ ದಂಡೇ ಹರಿದು ಬರುತ್ತಿದೆ. ಆದರೆ ಅದು ಅವರಿಗೆ ಇಷ್ಟವಿಲ್ಲ. ರಾಜಕಾರಣಿಗಳು ಬರುವುದು ಕೇವಲ ರಾಜಕೀಯಕ್ಕಾಗಿ ಎಂಬುದು ಉನ್ನಿಕೃಷ್ಣನ್ ಅಭಿಪ್ರಾಯ. ಭಾನುವಾರ ಉನ್ನಿಕೃಷ್ಣನ್ ಮನೆಗೆ ಭೇಟಿ ನೀಡಿದ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಹಾಗೂ ಅಲ್ಲಿನ ಗೃಹ ಸಚಿವರನ್ನು ಉನ್ನಿಕೃಷ್ಣನ್ ಮನೆಯೊಳಗೆ ಸೇರಿಸಲಿಲ್ಲ.

'ನಿನ್ನನ್ನು ಇಲ್ಲಿಗೆ ಬರಲು ಹೇಳಿದವರು ಯಾರು? ರಾಜಕಾರಣಿಗಳು ಮನೆಗೆ ಬರುವುದು, ನನ್ನ ಮಗ ರಾಜಕೀಯ ವಸ್ತುವಾಗುವುದು ನನಗೆ ಇಷ್ಟವಿಲ್ಲ. ಪ್ಲೀಸ್ ಗೇಟ್ ಔಟ್' ಎಂದು ಗುಡುಗಿದರು.

ಅಚ್ಯುತಾನಂದ ಭೇಟಿಗೂ ಕಾರಣವಿದೆ. ಉನ್ನಿಕೃಷ್ಣನ್ ಮೂಲತಃ ಕೇರಳದವರು. ಉದ್ಯೋಗ ಹರಸಿ ಬೆಂಗಳೂರಿಗೆ ಬಂದು ನೆಲೆಸಿದರು. ವೀರ ಮರಣ ಅಪ್ಪಿದ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ ಎಂಬ ಆಕ್ಷೇಪ ವ್ಯಕ್ತವಾದ್ದರಿಂದ ಅಚ್ಯುತಾನಂದನ್ ಭಾನುವಾರ ಮುಂಬೈಯಿಂದ ನೇರವಾಗಿ ಬೆಂಗಳೂರಿಗೆ ಬಂದರು.

ಮುಖ್ಯಮಂತ್ರಿ ಜೊತೆ ಬಂದಿದ್ದ ಗೃಹ ಸಚಿವರು ಉನ್ನಿಕೃಷ್ಣನ್ ಕೋಪ ನೋಡಿ ಒಳ ಪ್ರವೇಶಿಸುವ ಧೈರ್ಯ ಮಾಡಲಿಲ್ಲ. ಯಾವುದೇ ಕಾರಣಕ್ಕೂ ರಾಜಕಾರಣಿಗಳಿಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂದು ಅವರು ಹೇಳುತ್ತಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂಬೈ ಉಗ್ರ ಬೆಂಗಳೂರಿಗೆ
'ಪತ್ರಿಕೆಗಳು ಮೌಲ್ಯವನ್ನು ಅಳವಡಿಸಬೇಕು'
ಏಕತೆ ಪ್ರದರ್ಶನಕ್ಕೆ ದೇವೇಗೌಡ ಕರೆ
ಸಿಎಂಗೆ ರೈತರ ಪರ ನಿರ್ಲಕ್ಷ್ಯ: ರೈತ ಸಂಘ
ಆಧುನಿಕ ಶಸ್ತ್ರಾಸ್ತ್ರ ನೀಡಲು ಉದ್ಯಮಿಗಳು ಆಗ್ರಹ
ಹುತಾತ್ಮ ಯೋಧರಿಗೆ ಹೊಟೇಲು ಸಂಘದ ಶ್ರದ್ದಾಂಜಲಿ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...