|
| 'ಪತ್ರಿಕೆಗಳು ಮೌಲ್ಯವನ್ನು ಅಳವಡಿಸಬೇಕು' |
| ಮೂಡಬಿದಿರೆ, ಭಾನುವಾರ, 30 ನವೆಂಬರ್ 2008 ( 15:42 IST ) | |
ಜಗಮಗಿಸುವ ಸಾಂಸ್ಕೃತಿಕ ವೇದಿಕೆಯಲ್ಲೂ ಮುಂಬೈ ಉಗ್ರರ ದಟ್ಟ ಕರಿನೆರಳಿನ ವಿಷಾದ ತುಂಬಿದೆ ಎಂದರೆ ಅದಕ್ಕೆ ಕಾರಣ ಮಾಧ್ಯಮಗಳು. ತಮ್ಮ ಜೀವದ ಹಂಗು ತೊರೆದು ತಾಜಾ ಸುದ್ದಿಗಳನ್ನು ನೀಡುತ್ತಿದ್ದ ಮಾಧ್ಯಮ ಸಿಬ್ಬಂದಿಗಳಿಂದ ಆ ಘಟನಾವಳಿಗಳ ಛಾಯೆ ಇಲ್ಲೂ ಮೂಡಿದೆ ಎಂದು ಪತ್ರಕರ್ತ ನರೇಂದ್ರ ರೈ ದೆರ್ಲ ಹೇಳಿದರು.
ಅವರು ಮುದ್ರಣ ಮಾಧ್ಯಮಗಳ ಬಗ್ಗೆ ಮಾತನಾಡುತ್ತಾ, ಇಂದು ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗಾಂತ ಇದಕ್ಕೆ ಜಾಗತೀಕರಣ ಎಂಬುದನ್ನು ನಾನು ಒಪ್ಪುವುದಿಲ್ಲ. ಯಾಕೆಂದರೆ ಜಾಗತೀಕರಣ ಕೇರಳದಲ್ಲೂ ಇದೆ. ಆದರೆ ಅಲ್ಲಿನ ಜನತೆ ಮಲೆಯಾಳಂ ಮನೋರಮ, ಮಾತೃಭೂಮಿ ಪತ್ರಿಕೆಗಳನ್ನು ಅಲ್ಲಿನ ಜನತೆ ತಪ್ಪದೆ ಓದುತ್ತಾರೆ. ಕನ್ನಡ ಓದುಗರು ಕಡಿಮೆಯಾಗುತ್ತಿದ್ದಾರೆ. ಪತ್ರಿಕೆಗಳನ್ನು ಪೋಷಿಸಿ ಬೆಳೆಸುವ ಕೆಲಸ ಓದಗರಿಂದ ಆಗುತ್ತಿಲ್ಲ. ಇದರಿಂದಾಗಿ ಇಂದು ಅನೇಕ ಪತ್ರಿಕೆಗಳು ಶೋಚನೀಯ ಸ್ಥಿತಿಯಲ್ಲಿದೆ ಎಂದರು.
ಕೆಲ ವರ್ಷಗಳ ಹಿಂದೆ ಪತ್ರಿಕೆಗಳು ತನ್ನದೇ ಆದ ಮೌಲ್ಯವನ್ನು ಅಳವಡಿಸಿಕೊಂಡಿದ್ದವು. ದೇಶಪ್ರೇಮ ಹಾಗೂ ರಾಷ್ಟ್ರೀಯ ಐಕ್ಯತೆಯನ್ನು ಪತ್ರಿಕೆಗಳ ತಮ್ಮ ಮುಖ್ಯ ಗುರಿಯನ್ನಾಗಿಸಿದವು. ಅಂದು ಮಾಸ್ತಿ, ಡಿ.ವಿ.ಜಿ ಯಂತಹ ಸಾಹಿತಿಗಳು ಕೂಡಾ ತಮ್ಮನ್ನು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇಂದು ಪತ್ರಿಕೋದ್ಯಮ ತಮ್ಮ ಮೌಲ್ಯವನ್ನು ಕೂಡಾ ಅನುಸರಿಸುತ್ತಿಲ್ಲ.
ಇಂದು ಪತ್ರಿಕೆಗಳು ಕೇವಲ ತಮ್ಮ ಪ್ರಸಾರಣ ಅಂಶವನ್ನೇ ಮುಖ್ಯವನ್ನಾಗಿಸಿಕೊಂಡಿವೆ. ಇದರಿಂದಾಗಿ ಪ್ರಸಾರಣಾಧಿಕಾರಿ ಯಾವ ಸುದ್ದಿಯನ್ನು ಎಲ್ಲಿ ಪ್ರಕಟಿಸಬೇಕು ಎಂಬ ನಿರ್ಧಾರ ಕೈಗೊಳ್ಳುವಂತಾಗಿದೆ ಎಂದು ಪತ್ರಿಕೆಗಳ ದುರಂತದ ಬಗ್ಗೆ ಮಾತನಾಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|