|
| ಅನಧಿಕೃತ ನಿರ್ಮಾಣ ತಡೆಗೆ 'ಕರೆ ಕೇಂದ್ರ' |
| ಬೆಂಗಳೂರು, ಶುಕ್ರವಾರ, 28 ನವೆಂಬರ್ 2008 ( 15:59 IST ) | |
ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕಟ್ಟಡ ನಿರ್ಮಾಣ ತಡೆಯುವ ಉದ್ದೇಶದಿಂದ ಬಿಬಿಎಂಪಿ 'ಕರೆ ಕೇಂದ್ರ' ಆರಂಭಿಸಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ನಿಗಾ ಇಡುವುದಕ್ಕಾಗಿ ತಾಂತ್ರಿಕ ಹಾಗೂ ನಿಗಾ ಘಟಕ ಸ್ಥಾಪಿಸಿದೆ.
ಕರೆ ಕೇಂದ್ರ ಡಿಸೆಂಬರ್ 1 ರಿಂದ ಕಾರ್ಯಾರಂಭ ಮಾಡಲಿದೆ. ವಾರದ ಎಲ್ಲಾ ದಿನ 24 ಗಂಟೆ ಕಾರ್ಯ ನಿರ್ವಹಿಸಲಿರುವ ಕೇಂದ್ರದ ಆರಂಭಕ್ಕೆ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಅನಧಿಕೃತ ಕಟ್ಟಡ ನಿರ್ಮಾಣದ ಮಾಹಿತಿಯನ್ನು ಸಾರ್ವಜನಿಕರು ದೂರವಾಣಿಗೆ ಕರೆ ಮಾಡಿದ ತಕ್ಷಣ ಕೇಂದ್ರದ ಸಿಬ್ಬಂದಿ ದೂರನ್ನು ದಾಖಲಿಸುತ್ತದೆ. ದೂರು ದಾಖಲಿಸಿದವರಿಗೆ ಒಂದು ಕೋಡ್ ನೀಡುತ್ತದೆ. ನಂತರ ದೂರನ್ನು ತಾಂತ್ರಿಕ ನಿಗಾ ಘಟಕಕ್ಕೆ ರವಾನಿಸುತ್ತದೆ.
ಬಿಬಿಎಂಪಿ ಆಯುಕ್ತರ ನೇರ ಅಧೀನದಲ್ಲಿರುವ ತಾಂತ್ರಿಕ ಹಾಗೂ ನಿಗಾ ಘಟಕದ ಮೇಲ್ವಿಚಾರಣೆಯನ್ನು ಖುದ್ದಾಗಿ ಆಯುಕ್ತರೇ ಮಾಡುವುದು ವಿಶೇಷ. ಘಟಕ ಒಟ್ಟು ಎಂಟು ಮಂದಿ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಒಳಗೊಂಡಿರುತ್ತದೆ. ಈ ಎಂಜಿನಿಯರ್‌ಗಳು ಪಾಲಿಕೆಯ ಎಂಟು ವಲಯಗಳನ್ನು ಪ್ರತಿನಿಧಿಸುತ್ತಾರೆ.
ದೂರನ್ನು ಪರಿಶೀಲಿಸಿ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ ಕ್ರಮ ಕೈಗೊಳ್ಳದ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತದೆ. ನಿಗಾ ಘಟಕದ ಅಧಿಕಾರಿಗಳು ಪಾರದರ್ಶಕ ತನಿಖೆ ನಡೆಸುತ್ತಿದ್ದಾರೆಯೋ ಇಲ್ಲವೋ ಎಂಬುದನ್ನು ದೂರು ನೀಡಿದವರು ಕೋಡ್ ಬಳಸಿ ತಿಳಿದುಕೊಳ್ಳಬಹುದು. ಕರೆ ಕೇಂದ್ರದ ದೂರವಾಣಿ ಸಂಖ್ಯೆ :080-22276151, 22222753
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ |
| |
|
|
|
|
|
|
|