|
| ಕಲಾವಿದೆ ಜಯಶ್ರೀಗೆ ಕನ್ನಡಕೌಸ್ತುಭ |
| ಬೆಂಗಳೂರು, ಶುಕ್ರವಾರ, 28 ನವೆಂಬರ್ 2008 ( 15:55 IST ) | |
ನನಗಂತೂ ವಯಸ್ಸಾಗಿಲ್ಲ. ನಾನು ಇನ್ನೂ ಕೆಲಸ ಮಾಡ್ತೀನಿ ಇದು ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರ ಆತ್ಮವಿಶ್ವಾಸದ ನುಡಿ. ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲಾಕೌಸ್ತುಭ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
'ನನಗಿನ್ನೂ ದುಡಿಯುವ ಶಕ್ತಿ ಇದೆ. ಹುಮ್ಮಸ್ಸಿದೆ. ಕನ್ನಡಕ್ಕಾಗಿ ಕೆಲಸ ಮಾಡುವ ತಾಕತ್ತು ನನ್ನಲ್ಲಿದೆ ಎಂದರು. ನನ್ನ ಬದುಕಿನ ಹೆಮ್ಮೆಯ ವಿಷಯವೆಂದರೆ ಕಿರುತೆರೆ ಹಾಗೂ ಸಿನಿಮಾದಲ್ಲಿ ನಟಿಸಿದರೂ ಕೂಡಾ ಜನ ನನ್ನನ್ನುರಂಗಭೂಮಿ ಕಲಾವಿದೆ ಎನ್ನುವುದಕ್ಕೆ ಮೊದಲ ಮಾನ್ಯತೆ ಕೊಡುತ್ತಾರೆ' ಎಂದರು.
ಶಿಕ್ಷಣ ಕನ್ನಡದಿಂದ ಇಂಗ್ಲೀಷಿನತ್ತ ಹೊರಳಿದೆ. ಇದಕ್ಕಾಗಿ ಕನ್ನಡ ಸಂಘಟನೆಗಳು ಧ್ವನಿಯೆತ್ತಬೇಕು ಎಂದು ಸಾಹಿತಿ, ಕೌಸ್ತುಭ ಪ್ರಶಸ್ತಿ ಸ್ವೀಕರಿಸಿದ ಇಂದಿರಾ ಹೆಗಡೆ ಹೇಳಿದರು. ರಾಷ್ಟ್ರಮಟ್ಟದಲ್ಲಿ ಕತ್ತಿವರಸೆ ಸಾಧನೆ ಮಾಡಿದ ಕ್ರೀಡಾಪಡು ಗೀತಾ ಅವರನ್ನುವ ಸನ್ಮಾನಿಸಲಾಯಿತು. ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಉಪಸ್ಥಿತರಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ |
| |
|
|
|
|
|
|
|