|
| ವಿದ್ಯುತ್ ಸಮಸ್ಯೆಯೇಕೆ ನಿಂತಿಲ್ಲ: ರೈತರ ಪ್ರಶ್ನೆ |
| ಬೆಂಗಳೂರು, ಶುಕ್ರವಾರ, 28 ನವೆಂಬರ್ 2008 ( 15:51 IST ) | |
ಎಸ್.ಎಂ.ಕೃಷ್ಣ ಸರ್ಕಾರದಲ್ಲೂ ವಿದ್ಯುತ್ ಸಮಸ್ಯೆಯಿತ್ತು, ಬರ ಇತ್ತು. ಅವರು ಸಮರ್ಪಕವಾಗಿ ನಿಭಾಯಿಸಿದರು. ನಿಮ್ಮಿಂದ ಏಕೆ ಅದು ಸಾಧ್ಯವಾಗುತ್ತಿಲ್ಲ? ರೈತ ಮುಖಂಡರ ಇಂತಹ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಳಿ ಉತ್ತರ ಇರಲಿಲ್ಲ. ಯಥಾಪ್ರಕಾರ ಅವರು ಕೈ ತೋರಿಸಿದ್ದು ಕೇಂದ್ರದತ್ತ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ಮುಖಂಡರ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ. ಬೆಳೆ ಹಾನಿಗೆ ಪರಿಹಾರ ಸಿಕ್ಕಿಲ್ಲ. ದೊರೆತಿರುವ ಪರಿಹಾರದ ಚೆಕ್‌ಗಳು ನಗದಾಗುತ್ತಿಲ್ಲ.
ಕಾಡುಪ್ರಾಣಿಗಳಿಂದ ಬೆಳೆಗೆ ಹಾನಿಯಾಗುತ್ತಿದ್ದರೂ ಸರ್ಕಾರ ಸುಮ್ಮನಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕಬ್ಬಿಗೆ ಬೆಲೆ ನಿಗದಿಯಾಗಿಲ್ಲ. ಟನ್‌ಗೆ 160 ರೂ.ಪ್ರೋತ್ಸಾಹಧನ ಸಿಕ್ಕಿಲ್ಲ ಎಂದು ಮುಖಂಡರೂ ಆಪಾದಿಸಿದರು.
ಕೊನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೇಂದ್ರದಿಂದ ಸಿಗಬೇಕಾದ ಪಾಲಿನ ಅರ್ಧದಷ್ಟೂ ಸಿಗುತ್ತಿಲ್ಲ. ವಿದ್ಯುತ್ ವಿಚಾರದಲ್ಲಿ ಕೇಂದ್ರ ನೆರವು ನೀಡುತ್ತಿಲ್ಲ. ಕೇಂದ್ರ ತಂಡ ಸಮೀಕ್ಷೆ ನಡೆಸಿ ಹೋಗಿದೆಯೇ ಹೊರತು ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ರೈತರಿಗೆ ತಲಾ ಆರು ಗಂಟೆ ತ್ರಿಫೇಸ್ ಹಾಗೂ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಕಬ್ಬು ಬೆಳೆಗಾರರಿಗೆ 160 ರೂ. ಪ್ರೋತ್ಸಾಹಧನ ಕೊಡಿಸಲು ಸರ್ಕಾರ ಬದ್ಧವಾಗಿದೆ ಎಂದ ಅವರು, ರೈತರಿಗೆ ಅನ್ಯಾಯ ಮಾಡಿ ಅರೆಕ್ಷಣವೂ ಖುರ್ಚಿಯಲ್ಲಿ ಕುಳಿತುಕೊಳ್ಳಲಾರೆ. ರೈತರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ |
| |
|
|
|
|
|
|
|