ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ನಾಲ್ವರು ಹಾಲಿ ಸಚಿವರಿಗೆ ಬಿಜೆಪಿ ಟಿಕೆಟ್
ಬೆಂಗಳೂರು, ಶುಕ್ರವಾರ, 28 ನವೆಂಬರ್ 2008   ( 15:46 IST )
ವಿಧಾನಪರಿಷತ್ತಿನ ಎರಡು ಸ್ಥಾನ ಮತ್ತು ವಿಧಾನಸಭೆಯ 7 ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಬಿಜೆಪಿ ಹಾಲಿ ನಾಲ್ವರು ಸಚಿವರಿಗೆ ಟಿಕೆಟ್ ಖಚಿತಪಡಿಸಿದೆ.

ಆಪರೇಷನ್ ಕಮಲ ಕಾರ್ಯಾಚರಣೆ ಪರಿಣಾಮ ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಸಚಿವರಾಗಿರುವ ಉಮೇಶ್ ಕತ್ತಿ ಅವರಿಗೆ ಹುಕ್ಕೇರಿಯಿಂದಲೇ ಟಿಕೆಟ್ ನೀಡಲಾಗಿದೆ. ಇದೇ ರೀತಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಸಚಿವ ಬಾಲಚಂದ್ರ ಜಾರಕೀಹೊಳಿ ಅವರಿಗೆ ಅರಭಾವಿಯಿಂದ, ಮತ್ತೊಬ್ಬ ಸಚಿವ ಶಿವನಗೌಡ ನಾಯಕ ಅವರಿಗೆ ದೇವದುರ್ಗದಿಂದ ಟಿಕೆಟ್ ನೀಡಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ತಪ್ಪು ಆಸ್ತಿ ವಿವರ ನೀಡಿ ವಿವಾದಕ್ಕೆ ಒಳಗಾಗಿದ್ದ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ಕಾರವಾರದಿಂದ ಬಿಜೆಪಿ ಟಿಕೆಟ್ ನೀಡಿದೆ. ಹಾಗೆಯೇ, ಮದ್ದೂರಿನಿಂದ ಅಧಿಕೃತವಾಗಿ ಬಿಜೆಪಿ ಸೇರಿದ ಕಾಂಗ್ರೆಸ್ ನ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಇದೇ ವೇಳೆ ಸಚಿವರಾದ ಅರವಿಂದ ಲಿಂಬಾವಳಿ ಹಾಗೂ ಶೋಭಾ ಕರಂದ್ಲಾಜೆ ಅವರ ರಾಜೀನಾಮೆ ತೆರವಾದ ಎರಡು ವಿಧಾನಪರಿಷತ್ ಚುನಾವಣೆಗೆ ಪಕ್ಷದ ರಾಜ್ಯ ಕಾರ್ಯುದರ್ಶಿ ಎಸ್. ಕೈಲಾಸ್ ಹಾಗೂ ಮಂಡ್ಯದ ಮಧು ಮಾದೇಗೌಡ ಅವರನ್ನು ಹುರಿಯಾಳುಗಳಾಗಿ ಆಯ್ಕೆ ಮಾಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಧುಗಿರಿ ಕ್ಷೇತ್ರಕ್ಕೂ ಡಿ. 27ರಂದೇ ಉಪಚುನಾವಣೆ
ಬೆಂಗಳೂರಿನಲ್ಲಿ ಹೈ ಅಲರ್ಟ್
ಪೋಟಾ ಕಾಯ್ದೆಗೆ ಜಾರಿಗೆ ಮುಖ್ಯಮಂತ್ರಿ ಆಗ್ರಹ
ಮುಂಬೈ ಸ್ಫೋಟ: ಕಾಂಗ್ರೆಸ್ ಖಂಡನೆ
ಲೋಕಾಯುಕ್ತ ಬಲೆಗೆ ಭ್ರಷ್ಟ ಅಧಿಕಾರಿಗಳು
ಡಿ.ಸಿ.ತಮ್ಮಣ್ಣಗೆ ಬಿಜೆಪಿಗೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರು ಪೂಜಿಸಿದ ಖಾಕಿ ಕವರ್
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...