ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಬೆಂಗಳೂರು, ಮಂಗಳವಾರ, 25 ನವೆಂಬರ್ 2008   ( 18:01 IST )
ಮುಂಬರುವ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ರಣತಂತ್ರ ರೂಪಿಸಲು ನಾಳೆ ಹುಬ್ಬಳ್ಳಿಯಲ್ಲಿ ಜೆಡಿಎಸ್ ಸಂಘಟನಾ ಸಮಾಲೋಚನಾ ಸಭೆ ನಡೆಸುತ್ತಿದೆ.

ರಾಜ್ಯದಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ನಾಳೆಯ ಸಭೆಗೆ ಮಹತ್ವ ಬಂದಿದೆ. ಚುನಾವಣಾ ಕಾರ್ಯತಂತ್ರ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವಾರು ಮಹತ್ವದ ನಿರ್ಣಯಗಳನ್ನು ಪಕ್ಷದ ನಾಯಕರು ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ.

ಸಭೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಹಿಸಿದ್ದು, ಹಾಲಿ ಹಾಗೂ ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ.

ತುಮಕೂರು ವರದಿ:

ಏತನ್ಮಧ್ಯೆ, ಶ್ರೀರಾಮುಲು ಭವಿಷ್ಯದ ಮುಖ್ಯಮಂತ್ರಿ ಎಂಬ ಜನಾರ್ಧನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೂಕ್ತವಲ್ಲವೆಂಬುದರ ಸೂಚನೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಹಲವಾರು ಪ್ರಕರಣಗಳಲ್ಲಿ ಶ್ರೀರಾಮುಲು ಅವರು ಆರೋಪಿ ಎಂದು ಆರೋಪಿಸಿದ ಅವರು, ಇಂಥವರು ಮುಖ್ಯಮಂತ್ರಿಗಳಾದರೆ ಅದು ರಾಜ್ಯದ ದುರ್ದೈವ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಸಚಿವ ಉದಾಸಿಗೆ ತಟ್ಟಿದ ನೀತಿ ಸಂಹಿತೆ ಬಿಸಿ
ರೆಡ್ಡಿ ಹೇಳಿಕೆಗೆ ಅಪಾರ್ಥ ಬೇಡ: ಯಡಿಯ‌ೂರಪ್ಪ
ಅನಗತ್ಯ ಖರ್ಚುಗಳಿಗೆ ಕಡಿವಾಣ
ನಾರಿಯರ ಸೀರೆಗಳಲ್ಲಿ 'ಕರ್ನಾಟಕ ದರ್ಶನ'
ಮೈತ್ರಿ ಪ್ರಸ್ತಾವನೆ ಹೈಕಮಾಂಡ್ ಪರಿಶೀಲನೆ: ದೇಶಪಾಂಡೆ
ಗ್ರಹ ಗತಿ
ದೈನಿಕ - ನಿಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ.ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕನ್ನಡ ಸಿನೆಮಾಗಳ ಬಗ್ಗೆ ನಿರ್ಲಕ್ಷ್ಯ: ಕಾಸರವಳ್ಳಿ
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಅವಲೋಕಿಸುವಂತೆ ಮಾಡಿದ ಕನ್ನಡ ಸಿನಿಮಾಗಳಿಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಹೆಸರಾಂತ ನಿರ್ದೇಶಕ
ಅಭಿವೃದ್ಧಿ ಕುಂಠಿತ: ಮುಖ್ಯಮಂತ್ರಿ ಚರ್ಚೆ
ನಿಗದಿತ ದಿನದಂದೇ ಸಮ್ಮೇಳನ: ಕಸಾಪ ನಿರ್ಧಾರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...