ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಗೌಡರು ಪೂಜಿಸಿದ ಖಾಕಿ ಕವರ್
ಹಾಸನ, ಮಂಗಳವಾರ, 25 ನವೆಂಬರ್ 2008   ( 12:12 IST )
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಾರಿ ಹೊಸ ರೀತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಸೋಮವಾರ ದೇವೇಗೌಡರು ಅವರು ಹುಟ್ಟಿ ಬೆಳೆದ ಹೊಳೆನರಸೀಪುರ ತಾಲೂಕು ಹರದಹಳ್ಳಿಯ ಈಶ್ವರ ದೇಗುಲಕ್ಕೆ ಏಕಾಂಗಿಯಾಗಿ ಬಂದು ಪೂಜೆ ಸಲ್ಲಿಸಿದ್ದಾರೆ. ಜತೆಗೆ ತಮ್ಮ ಜೊತೆ ತಂದಿದ್ದ ಖಾಕಿ ಕವರಿಗೂ ಪೂಜೆ ಸಲ್ಲಿಸುವ ಮೂಲಕ ಮಾಧ್ಯಮಗಳ ಹಾಗೂ ಗ್ರಾಮಸ್ಥರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಲು ಬಂದಾಗ, 'ಇಂದು ಕಡೆ ಕಾರ್ತೀಕ ಸೋಮವಾರ. ನನ್ನ ಮನೆ ದೇವರು ಈಶ್ವರ. ಪೂಜೆ ಸಲ್ಲಿಸಲು ಬಂದಿದ್ದೇನೆ. ಅಷ್ಟೇ ದೇವರ ಸನ್ನಿಧಿಯಲ್ಲಿ ನೋ ಪಾಲಿಟಿಕ್ಸ್ ಪ್ಲೀಸ್' ಎಂದು ಹೇಳಿ ದೇವೇಗೌಡರು ಕಾರು ಹತ್ತಿ ಬೆಂಗಳೂರಿನತ್ತ ಹೊರಟೇ ಬಿಟ್ಟರು.

ಸಾಮಾನ್ಯವಾಗಿ ಗೌಡರು ಬಂದರೆ ಅಲ್ಲಿನ ಗ್ರಾಮಸ್ಥರಿಗೆ ಕಾಸು ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಿದ್ದರು. ಆದರೆ ಈ ಬಾರಿ ಯಾರಿಗೂ ಏನು ಕೊಡದೇ ನಗುತ್ತಾ ಟಾಟಾ ಹೇಳಿ ಕಾರು ಹತ್ತಿದರು. ಆದರೆ ಪೂಜೆ ವೇಳೆ ಅಲ್ಲೇ ಇದ್ದ ಆರ್ಚಕರ 10 ವರ್ಷದ ಮಗನನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆತನಿಗೆ ದುಡ್ಡು ಕೊಟ್ಟರು. ಒಂದು ಮ‌ೂಲದ ಪ್ರಕಾರ, ಪಕ್ಷದ ಅಭ್ಯರ್ಥಿಗಳಿಗೆ ನೀಡುವ ಬಿ ಫಾರಂ ಕವರಿನಲ್ಲಿತ್ತು ಎನ್ನಲಾಗಿದೆ. ಒಟ್ಟಾರೆ ಈಗ ಗ್ರಾಮದಲ್ಲಿ ಗೌಡರು ತಂದ ಖಾಕಿ ಕವರಿನದ್ದೆ ಚರ್ಚೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿ.ಸಭಾ ಉಪಚುನಾವಣೆ: ಪಕ್ಷೇತರರ ಮೇಲೆ ತೂಗುಕತ್ತಿ
ಜೆಡಿಎಸ್‌ನಿಂದ ಟ್ರಾಫಿಕ್ ಜಾಮ್‌‍ಗೆ ಎಸಿಪಿ ತಲೆದಂಡ
ಹೊಂದಾಣಿಕೆ ಆಮಂತ್ರಣ ತಿರಸ್ಕರಿಸಿದ ಜೆಡಿಎಸ್
ನಿಗದಿತ ದಿನದಂದೇ ಸಮ್ಮೇಳನ: ಕಸಾಪ ನಿರ್ಧಾರ
ಅಭಿವೃದ್ಧಿ ಕುಂಠಿತ: ಮುಖ್ಯಮಂತ್ರಿ ಚರ್ಚೆ
ಕನ್ನಡ ಸಿನೆಮಾಗಳ ಬಗ್ಗೆ ನಿರ್ಲಕ್ಷ್ಯ: ಕಾಸರವಳ್ಳಿ
ಗ್ರಹ ಗತಿ
ದೈನಿಕ - ನಿಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ.ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕನ್ನಡ ಸಿನೆಮಾಗಳ ಬಗ್ಗೆ ನಿರ್ಲಕ್ಷ್ಯ: ಕಾಸರವಳ್ಳಿ
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಅವಲೋಕಿಸುವಂತೆ ಮಾಡಿದ ಕನ್ನಡ ಸಿನಿಮಾಗಳಿಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಹೆಸರಾಂತ ನಿರ್ದೇಶಕ
ಅಭಿವೃದ್ಧಿ ಕುಂಠಿತ: ಮುಖ್ಯಮಂತ್ರಿ ಚರ್ಚೆ
ನಿಗದಿತ ದಿನದಂದೇ ಸಮ್ಮೇಳನ: ಕಸಾಪ ನಿರ್ಧಾರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...