|
| ಪ್ರಿಯತಮೆಗಾಗಿ ಪತ್ನಿಯನ್ನು ಕೊಂದ ಟೆಕಿ |
| ಬೆಂಗಳೂರು, ಶನಿವಾರ, 15 ನವೆಂಬರ್ 2008 ( 15:38 IST ) | |
ತನ್ನ ಪ್ರಿಯತಮೆ ಜತೆ ಸಂಬಂಧ ಮುಂದುವರಿಸಲು ಸ್ವತಃ ಪತ್ನಿಯನ್ನು ಚೆನ್ನೈ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಹತ್ಯೆ ಮಾಡಿದ ಘಟನೆ ನಡೆದಿದೆ. ಎಂಜಿನಿಯರ್ ಮನೋಜ್‌ಕುಮಾರ್ ತಾನು ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ಸಾಧ್ಯವಾಗಲಿಲ್ಲ. ನಿಶ್ಚಿತಾರ್ಥದ ಮದುವೆಯಾದ್ದರಿಂದ ಅದನ್ನು ಮುರಿದು ತನ್ನ ತಂದೆತಾಯಿಗಳನ್ನು ನೋಯಿಸಲೂ ಅವನಿಗೆ ಇಷ್ಟವಿರಲಿಲ್ಲ.
ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ತನ್ನ ಪತ್ನಿಯನ್ನು ಮುಗಿಸಿ ಪ್ರಿಯತಮೆ ಅನುರಾಧ ರೆಡ್ಡಿ ಜತೆ ಸಂಬಂಧ ಮುಂದುವರಿಸುವ ಯೋಜನೆ ರೂಪಿಸಿದ. ಲಕ್ಷ್ಮಿ ಕೂಡ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ನ.8ರಂದು ಅಸ್ವಸ್ಥತೆಯಿಂದ ಅವರು ಮನೆಯಲ್ಲೇ ಉಳಿದಿದ್ದರು. ಮನೋಜ್ ಕಚೇರಿಯಲ್ಲಿ ಮೂರು ಗಂಟೆ ವಿರಾಮ ಪಡೆದು ಎಚ್‌ಎಎಲ್ ಬಳಿಯಿರುವ ತನ್ನ ನಿವಾಸಕ್ಕೆ ತೆರಳಿ ಪತ್ನಿಯನ್ನು ಹತ್ಯೆ ಮಾಡಿ ಪುನಃ ಕಚೇರಿಗೆ ವಾಪಸಾಗಿದ್ದ. ಮಾಮೂಲಿಯಂತೆ ಬೆಳಿಗ್ಗೆ 9.30ಕ್ಕೆ ಮನೆಬಿಟ್ಟಿದ್ದ ಮನೋಜ್ ಮಧ್ಯಾಹ್ನ ಮನೆಗೆ ವಾಪಸಾದ.
ಲಕ್ಷ್ಮಿ ಜತೆ ಮಾತನಾಡುವಾಗ ಆಕೆಯ ಮುಖಕ್ಕೆ ಖಾರದಪುಡಿ ಎರಚಿದ. ಆಕೆ ಅಡುಗೆಮನೆಯಲ್ಲಿ ಮುಖ ತೊಳೆಯುವಾಗ ಮನೋಜ್ ಕೈಗೆ ಗ್ಲವ್ಸ್ ಧರಿಸಿ ಕಬ್ಬಿಣದ ಪೈಪ್‌ನಿಂದ ತಲೆಗೆ ಹೊಡೆದಿದ್ದಲ್ಲದೇ ಕುತ್ತಿಗೆಯನ್ನು ಬಿಗಿದು ಹತ್ಯೆಮಾಡಿದ.ಬಳಿಕ ಪೊಲೀಸರನ್ನು ದಾರಿತಪ್ಪಿಸಲು 30,000 ರೂ. ಮತ್ತು ಪತ್ನಿಯ ಆಭರಣ, ಮೊಬೈಲ್ ಫೋನ್ ತೆಗೆದುಕೊಂಡು ಹೋದ.
ಕಬ್ಬಿಣದ ಪೈಪ್ ಸಮೇತ ಎಲ್ಲವನ್ನೂ ಚೀಲವೊಂದಕ್ಕೆ ಹಾಕಿ ಕಚೇರಿಗೆ ತೆರಳುವ ಹಾದಿಯಲ್ಲಿ ಚೀಲವನ್ನು ಈಜಿಪುರದಲ್ಲಿ ಬಿಸಾಡಿದ್ದ. ರಾತ್ರಿ 9.30ಕ್ಕೆ ಮನೆಗೆ ಹಿಂತಿರುಗಿದ ಮನೋಜ್ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿ ಹತ್ಯೆಯಾಗಿದ್ದಾರೆಂದು ತಿಳಿಸಿದ. ಪೊಲೀಸರು ಮನೋಜ್ ಬಗ್ಗೆ ಸಂಶಯಿತರಾಗಿ ಕಚೇರಿಯಲ್ಲಿ ಅವನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಮನೋಜ್ 3 ಗಂಟೆಗಳ ಕಾಲ ಎಲ್ಲಿ ತೆರಳಿದ್ದನೆಂದು ಪೊಲೀಸರಿಗೆ ಮನದಟ್ಟು ಮಾಡುವಲ್ಲಿ ವಿಫಲನಾದ. ಮನೋಜ್ ಬಿಸಾಕಿದ್ದ ಚೀಲ ಕೂಡ ಪತ್ತೆಯಾಗಿದ್ದು ಅವನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಲವು ವಿಚಾರಗಳ ಬಗ್ಗೆ ಒಡಹುಟ್ಟಿದವರಲ್ಲಿ ವಿನಿಮಯ ಮಾಡಿಕೊಳ್ಳಲಿರುವಿರಿ. ಸಂಶೋಧನೆಯ ಕುರಿತು ಆಸಕ್ತಿ ಬರಲಿದೆ. ಸ್ವತ್ತು ತಗಾದೆಗಳು ಫಲಪ್ರದವಾಗಲಿದೆ. ಹಲವು ಮಾತುಕತೆಗಳು ನಡೆಯಲಿದೆ. ಅಧ್ಯಯನದಲ್ಲಿ ಪ್ರಗತಿ ಸಾಧಿಸಲಿರುವಿರಿ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - 'ನಿಷೇಧಾಜ್ಞೆ' ಚಿತ್ರ ಬಿಡುಗಡೆಯಾಗುವ ಮುನ್ನವೇ ನಿರ್ದೇಶಕ ಪದ್ಮನಾಭ್ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು ದಯಾ. ದಿಲ್ಲಿಯಲ್ಲಿ ನಡೆದ ಒಂದು ಶೂಟೌಟ್ ಘಟನೆಯನ್ನು ಚಿತ್ರದ ಆಧರಿಸಿದೆ ಎನ್ನುತ್ತಾರೆ ಪದ್ಮನಾಭ್. |
| |
|
|
|
|
|
|
|