ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಬೆಂಬಲಿಗರ ಜತೆ ಸಿದ್ದು ರಹಸ್ಯ ಮಾತುಕತೆ
ಬೆಂಗಳೂರು, ಶುಕ್ರವಾರ, 7 ನವೆಂಬರ್ 2008   ( 11:26 IST )
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಅವರ ಬೆಂಬಲಿಗರು ನಗರದ ಹೊಟೇಲ್ ವೊಂದರಲ್ಲಿ ಸಮಾಲೋಚನೆ ನಡೆಸಿದ್ದಾರೆ.

ಇದೊಂದು ಔಪಚಾರಿಕ ಭೇಟಿ ಎಂದು ಸಿದ್ದು ಬಣದ ಮುಖಂಡರು ತಿಳಿಸಿದ್ದರೂ, ಕಾಂಗ್ರೆಸ್ ಪಕ್ಷ ತಮ್ಮನ್ನು ಕಡೆಗೆಣಿಸುತ್ತಿದೆ. ಈ ನಿಟ್ಟಿನಲ್ಲಿ ಮುಂದೆನೂ ಎಂಬ ಬಗ್ಗೆ ವಿವರವಾದ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾದ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಬೆಂಬಲಿಗರೊಂದಿಗೆ ಸುದಿರ್ಘ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸಂಸದ ಕೋದಂಡರಾಮಯ್ಯ, ಮಾಜಿ ಸಚಿವರಾದ ಡಾ| ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ನಾಯಕರು ಕಾಂಗ್ರೆಸ್ ತೊರೆದು ಹೊಸದೊಂದು ರಾಜಕೀಯ ಪಕ್ಷ ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಮುಖಂಡರ ಹೇಳಿಕೆ ಬಗ್ಗೆ ಸಿದ್ದರಾಮಯ್ಯನವರು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈಗ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಕಾದು ನೋಡೋಣ. ಮುಂದೆ ಉಪಚುನಾವಣೆಯಲ್ಲಿಯೂ ಇದೇ ರೀತಿ ಮುಂದುವರೆದರೆ, ಮುಂದಿನ ತೀರ್ಮಾನ ಕೈಗೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೇವರಿಕ್ ಗುತ್ತಿಗೆ: ಹೈಕೋರ್ಟ್ ತಡೆಯಾಜ್ಞೆ
ಅಪರೇಷನ್ ಕಮಲದಿಂದ ಬಿಜೆಪಿಗೆ ಕುತ್ತು: ಕುಮಾರಸ್ವಾಮಿ
ಪಕ್ಷದ ಗೆಲುವಿಗೆ ತಾಳ್ಮೆ ಹಾಗೂ ಹುಮ್ಮಸ್ಸು ಅಗತ್ಯ: ಡಿ.ಕೆ.ಶಿ
ನಗರದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕರಂದ್ಲಾಜೆ
ಕೆಎಂಎಫ್ ಲೆಕ್ಕ ಪರಿಶೋಧನೆಗೆ ತಂಡ
20 ಶತಕೋಟಿ ಐಟಿ ರಫ್ತು ಗುರಿ: ಯಡಿಯೂರಪ್ಪ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್,
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸ್ ಕ್ಷಮೆ ಕೇಳಬೇಕು: ಮುಖ್ಯಮಂತ್ರಿ ಆಗ್ರಹ
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪವನ್ನು ಖಂಡಿಸಿರುವ....
ಲೋಕಾಯುಕ್ತ ತನಿಖೆಗೆ ಸಿದ್ಧ: ರೇವಣ್ಣ
ಪಂಚಾಯ್ತಿಗಳಿಗೆ ಉಸ್ತುವಾರಿ ಸಮಿತಿ: ಉಗ್ರಪ್ಪ ಕಿಡಿ
ಮನರಂಜನೆ
ಚಿತ್ರ ಸುದ್ದಿ - ಯಶಸ್ಸಿನ ನಿರೀಕ್ಷೆಯೊಂದಿಗೆ ಯಶಸ್ ಮತ್ತೆ ಬೆಳ್ಳಿತೆರೆಗೆ ಕಾಲಿರಿಸಿದ್ದಾರೆ. ಯುಗಯುಗಗಳೇ ಸಾಗಲಿ ಎಂಬ ಚಿತ್ರದಿಂದ ನಾಯಕ ಪಟ್ಟ ಗಿಟ್ಟಿಸಿಕೊಂಡರೂ ಚಿತ್ರ ಮಾತ್ರ ಗೆಲ್ಲಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಸಂಗಮ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ಬಿಟ್ಟರೆ ಕೆಲ ಕಾಲ ಗಾಂಧಿನಗರದಿಂದ ದೂರ ಉಳಿದಿದ್ದರು.
ಮುಂದೆ ಓದಿ|ಮತ್ತಷ್ಟು...