ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಪಕ್ಷದ ಗೆಲುವಿಗೆ ತಾಳ್ಮೆ ಹಾಗೂ ಹುಮ್ಮಸ್ಸು ಅಗತ್ಯ: ಡಿ.ಕೆ.ಶಿ
ಮಧುಗಿರಿ, ಶುಕ್ರವಾರ, 7 ನವೆಂಬರ್ 2008   ( 10:54 IST )
ಕಾಂಗ್ರೆಸ್ ಪಕ್ಷದ ನಾಯಕರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾರ್ಯಕರ್ತರಲ್ಲಿರುವ ತಾಳ್ಮೆ ಹಾಗೂ ಹುಮ್ಮಸ್ಸನ್ನು ಬೆಳೆಸಿಕೊಂಡರೆ ಉಪಚುನಾವಣೆಯಲ್ಲಿ ಪಕ್ಷ ಜಯಗಳಿಸಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದ ಮುಖಂಡರು ನಿಗಮಮಂಡಳಿ ಅಧ್ಯಕ್ಷರಾಗಲು, ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲು ಮುಂದಿರುತ್ತಾರೆ. ಆದರೆ ಬೇರು ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕಾರ್ಯಕರ್ತರು ಅನೇಕ ಸಮಸ್ಯೆಗಳಲ್ಲಿ ಸಿಲುಕಿರುತ್ತಾರೆ. ಅವರಿಗೆ ಶಕ್ತಿ ತುಂಬಬೇಕಾದರೆ ಮುಖಂಡರು ಭಿನ್ನಾಭಿಪ್ರಾಯ ಮರೆಯಬೇಕು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮಧುಗಿರಿ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷ ಗೆಲುವು ನಿಶ್ಚಿತ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮುಂದೆ ಬರಬೇಕೆಂದು ಅವರು ಕರೆ ನೀಡಿದರು.

ಇದೇ ವೇಳೆ ಶಾಸ್ತ್ರೀಯ ಸ್ಥಾನಮಾನದ ಕುರಿತು ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡುವಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಐತಿಹಾಸಿಕ ನಿರ್ಧಾರವೇ ಕಾರಣ ಎಂದು ಬಣ್ಣಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಗರದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕರಂದ್ಲಾಜೆ
ಕೆಎಂಎಫ್ ಲೆಕ್ಕ ಪರಿಶೋಧನೆಗೆ ತಂಡ
20 ಶತಕೋಟಿ ಐಟಿ ರಫ್ತು ಗುರಿ: ಯಡಿಯೂರಪ್ಪ
ಹೊಗೇನಕಲ್ ವಿವಾದ: ಸರ್ವಪಕ್ಷ ನಿಯೋಗಕ್ಕೆ ಚಿಂತನೆ
ವಿದ್ಯುತ್ ಬಿಕ್ಕಟ್ಟು: ಸಚಿವ ಸಂಪುಟದ ಉಪಸಮಿತಿ ಸಭೆ
ಕಾಂಗ್ರೆಸ್ ಸಭೆಯಲ್ಲಿ ಮಾತಿನ ಚಕಮಕಿ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್,
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸ್ ಕ್ಷಮೆ ಕೇಳಬೇಕು: ಮುಖ್ಯಮಂತ್ರಿ ಆಗ್ರಹ
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪವನ್ನು ಖಂಡಿಸಿರುವ....
ಲೋಕಾಯುಕ್ತ ತನಿಖೆಗೆ ಸಿದ್ಧ: ರೇವಣ್ಣ
ಪಂಚಾಯ್ತಿಗಳಿಗೆ ಉಸ್ತುವಾರಿ ಸಮಿತಿ: ಉಗ್ರಪ್ಪ ಕಿಡಿ
ಮನರಂಜನೆ
ಚಿತ್ರ ಸುದ್ದಿ - ಯಶಸ್ಸಿನ ನಿರೀಕ್ಷೆಯೊಂದಿಗೆ ಯಶಸ್ ಮತ್ತೆ ಬೆಳ್ಳಿತೆರೆಗೆ ಕಾಲಿರಿಸಿದ್ದಾರೆ. ಯುಗಯುಗಗಳೇ ಸಾಗಲಿ ಎಂಬ ಚಿತ್ರದಿಂದ ನಾಯಕ ಪಟ್ಟ ಗಿಟ್ಟಿಸಿಕೊಂಡರೂ ಚಿತ್ರ ಮಾತ್ರ ಗೆಲ್ಲಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಸಂಗಮ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ಬಿಟ್ಟರೆ ಕೆಲ ಕಾಲ ಗಾಂಧಿನಗರದಿಂದ ದೂರ ಉಳಿದಿದ್ದರು.
ಮುಂದೆ ಓದಿ|ಮತ್ತಷ್ಟು...