ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಾಂಗ್ರೆಸ್ ಕ್ಷಮೆ ಕೇಳಬೇಕು: ಮುಖ್ಯಮಂತ್ರಿ ಆಗ್ರಹ
ಬೆಂಗಳೂರು, ಬುಧವಾರ, 5 ನವೆಂಬರ್ 2008   ( 12:54 IST )
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪವನ್ನು ಖಂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಈ ರೀತಿ ಆರೋಪ ಮಾಡುವ ಮ‌ೂಲಕ ಸ್ಥಳೀಯ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.

ಒಂದು ವೇಳೆ ಕ್ಷಮೆ ಕೇಳದಿದ್ದರೆ ಸ್ಥಳೀಯ ಜನಪ್ರತಿನಿಧಿಗಳು ಅವರ ವಿರುದ್ಧ ಪ್ರತಿಭಟನೆಗೆ ಇಳಿಯುತ್ತಾರೆ. ಆಗ ಉಂಟಾಗುವ ಕಾನೂನು ಮತ್ತು ಸುವ್ಯವಸ್ಥೆಗೆ ಪ್ರತಿಪಕ್ಷ ನಾಯಕರೇ ಹೊಣೆಯಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸಾಲುಸಾಲಾಗಿ ಪಕ್ಷ ಸೇರುತ್ತಿದ್ದಾರೆ. ಇದರಿಂದಾಗಿ ಆ ಪಕ್ಷದ ನಾಯಕರು ಕಳವಳಕ್ಕೆ ಒಳಗಾಗಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಂಬರುವ 8 ವಿಧಾನಸಭಾ ಉಪಚುನಾವಣೆಯಲ್ಲಿಯ‌ೂ ಬಿಜೆಪಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೋಲಿನ ಪರಾಮರ್ಶೆಗೆ ಇಂದು ಕಾಂಗ್ರೆಸ್ ಸಭೆ
ಕೆಎಸ್‌ಆರ್‌ಟಿಸಿ 18 ಸಾವಿರ ಹುದ್ದೆ ನೇಮಕಾತಿಗೆ ಸೂಚನೆ
ಕಾಂಗ್ರೆಸ್‌ಗೆ ದಂತಭಗ್ನ: ಬಿಜೆಪಿ ಲೇವಡಿ
13ರಂದು ಡಾ. ರಾಜ್ ಶಿಲಾನ್ಯಾಸ: ಕರಂದ್ಲಾಜೆ ಘೋಷಣೆ
ಹಾಲಿನ ದರ: ಮುಂದಿನ ತಿಂಗಳು ಅಂತಿಮ ನಿರ್ಧಾರ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಹಂಪಿ ಉತ್ಸವ ನೋಡಿ ಬೆರಗಾದ ಅಡ್ವಾಣಿ
ವಿಜಯನಗರದ ಸಾಮ್ರಾಜ್ಯದ ವೈಭವ, ಶ್ರೀ ಕೃಷ್ಣರಾಯನ ಧೈರ್ಯ, ಆಡಳಿತದ ಕುರಿತು ಕೇಳಿದ್ದೆ.
ತಪ್ಪಿಹೋದ ಅಧ್ಯಕ್ಷ ಸ್ಥಾನ: ಸೋಮಣ್ಣ ಕಿಡಿ
ಹಾಲಿನ ದರ: ಮುಂದಿನ ತಿಂಗಳು ಅಂತಿಮ ನಿರ್ಧಾರ
ಮನರಂಜನೆ
ಚಿತ್ರ ಸುದ್ದಿ - ಹಿಂದೆ ಚಿತ್ರಗಳಲ್ಲಿ ಒಂದಲ್ಲ ಒಂದು ಪ್ರಾಣಿಗಳನ್ನು ಬಳಸುತ್ತಿದ್ದರು. ರಾಜ್ ಕುಮಾರ್, ವಿಷ್ಣುವರ್ಧನ್ ಆನೆಯ ಸೊಂಡಿಲಿನಲ್ಲಿ ಕುಳಿತು ಹಾಡು ಹೇಳಿದ್ದನ್ನು ನಾವು ನೋಡಿದ್ದೇವೆ. ಆದರೆ ಪ್ರಾಣಿ ದಯಾ ಸಂಘದವರು ಇದಕ್ಕೆ ನಿಷೇಧ ಹೇರಿದ ಬಳಿಕ ಪ್ರಾಣಿಗಳನ್ನು ಬಳಸಬೇಕಾದರೆ ಸಂಬಂಧಪಟ್ಟ ಇಲಾಖೆಗಳಿಂದ
ಮುಂದೆ ಓದಿ|ಮತ್ತಷ್ಟು...