|
| ರೇಡಿಯೋ ಕಚೇರಿ ಮೇಲೆ ಕರವೇ ದಾಳಿ |
| ಮೈಸೂರು, ಶನಿವಾರ, 1 ನವೆಂಬರ್ 2008 ( 17:35 IST ) | |
ಕನ್ನಡ ರಾಜ್ಯೋತ್ಸವದ ದಿನದಂದು ಹಿಂದಿ ಹಾಡುಗಳ ಪ್ರಸಾರ ಮಾಡಿರುವುದನ್ನು ವಿರೋಧಿಸಿ ಇಂದು (ಶನಿವಾರ) ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಖಾಸಗಿ ಎಫ್‌ಎಂ ಮೇಲೆ ದಾಳಿ ನಡೆಸಿದ್ದಾರೆ.
ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಕಾರ್ಯಕರ್ತರು ಕಚೇರಿಯಲ್ಲಿನ ಪೀಠೋಪಕರಣ ಧ್ವಂಸ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿರುವ 93.5 ಎಸ್ಎಫ್ ಎಂ ರೇಡಿಯೋ ಚಾನಲ್ ಇಂದು ಬೆಳಿಗ್ಗೆ ಹಿಂದಿ ಹಾಡುಗಳ ಪ್ರಸಾರ ಮಾಡಿತ್ತು. ಇದರಿಂದ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಕಚೇರಿ ನುಗ್ಗಿ ದಾಂಧಲೆ ನಡೆಸಿದರು. ಘಟನೆಯಿಂದ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾನೆ. ಕಾರ್ಯಕರ್ತರು ಕಚೇರಿಯಲ್ಲಿದ್ದ ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಕಲಿಯುತ್ತೀರಿ ಮತ್ತು ನೀವು ಕಲಿತಿರುವುದನ್ನು ಹೆಮ್ಮೆಯಿಂದ, ವಿಶಿಷ್ಟವಾಗಿ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಜೀವನದಲ್ಲಿ ಹೊಸ ಆರಂಭ ಪಡೆಯಲು ಇದು ಅದ್ಭುತವಾದ ಸಮಯವಾಗಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಂದು ಸಮಯದಲ್ಲಿ ನಿರ್ಮಾಪಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿದ್ದ ಗೋಲ್ಡನ್ ಸ್ವಾರ್ ಗಣೇಶ್‌ರ ಬೇಡಿಕೆ ಕಡಿಮೆಯಾಗಿದೆಯೇ? ಹೌದೆನ್ನುತ್ತದೆ ಗಾಂಧಿನಗರದ ಕೆಲ ಮೂಲಗಳು. |
| |
|
|
|
|
|
|
|