ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಚರ್ಚ್‌ಗಳ ಮೇಲೆ ದಾಳಿ: ಪಿಐಎಲ್ ವಿಚಾರಣೆ ಮುಂದಕ್ಕೆ
ಬೆಂಗಳೂರು, ಶನಿವಾರ, 1 ನವೆಂಬರ್ 2008   ( 15:54 IST )
ಮಂಗಳೂರು ಮತ್ತು ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಂದ ಚರ್ಚ್‌ಗಳ ಮೇಲೆ ದಾಳಿ ಕುರಿತು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಭಾಗೀಯ ಪೀಠವು ಮುಂದಿನ ವರ್ಷ ಫೆಬ್ರವರಿಗೆ ಮುಂದೂಡಿದೆ.

"ಇಲ್ಲಿಯವರೆಗೆ ರಾಜ್ಯ ಶಾಂತವಾಗಿದೆ. ಸರ್ಕಾರ ಕೂಡ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೂ ನೀವು ಈ ವಿಷಯ ಕೆದಕುವುದೇಕೆ?" ಎಂದು ಪೀಠವು ಪ್ರಶ್ನಿಸಿದೆ. ಅರ್ಜಿದಾರರ ಪರ ವಕೀಲರು ನ್ಯಾಯಮ‌ೂರ್ತಿ ಬಿ.ಕೆ. ಸೋಮಶೇಖರ ತನಿಖಾ ಆಯೋಗವನ್ನು ನೇಮಿಸಿದ ಕ್ರಮವನ್ನು ಪ್ರಶ್ನಿಸಿದರು. ನಿವೃತ್ತ ನ್ಯಾಯಾಧೀಶರು ಮುಖ್ಯಮಂತ್ರಿ ಕ್ಷೇತ್ರದವರಾಗಿದ್ದು, ಆಯೋಗವನ್ನು ರಾಜ್ಯ ವಿಧಾನಸಭೆಯ ನಿರ್ಣಯದ ಬದಲಾಗಿ ಸಚಿವಸಂಪುಟದ ನಿರ್ಧಾರದ ಆಧಾರದ ಮೇಲೆ ರಚಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದರು.

ಕ್ರೈಸ್ತಸನ್ಯಾಸಿನಿಯರು ಮತ್ತು ಮಹಿಳೆಯರ ಮೇಲೆ ಪೊಲೀಸರ ಅತಿರೇಕಗಳ ಆರೋಪ ಕುರಿತು ತನಿಖೆ ನಡೆಸುವಂತೆ ಮತ್ತು ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಆಯೋಗದಿಂದ ಕಾಲಮಿತಿಯ ತನಿಖೆ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭರದ ಸಿದ್ಧತೆ
ಕನ್ನಡಿಗರಲ್ಲಿ ಮೊಳಕೆಯೊಡೆಯಲಿ ಕನ್ನಡ
ಮಹೇಂದ್ರ ಕುಮಾರ್ ಬಿಡುಗಡೆ
ಭಾಷಾ ಚರಿತ್ರೆಯಲ್ಲೊಂದು ಇತಿಹಾಸ
ದೆಹಲಿಗೆ ನಿಯೋಗ ರದ್ದು: ಮುಖ್ಯಮಂತ್ರಿ
ಭುಗಿಲೆದ್ದ ಆಕ್ರೋಶ- ಹೈಕೋರ್ಟ್‌ಗೆ ಅರ್ಜಿ
ಗ್ರಹ ಗತಿ
ದೈನಿಕ - ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಕಲಿಯುತ್ತೀರಿ ಮತ್ತು ನೀವು ಕಲಿತಿರುವುದನ್ನು ಹೆಮ್ಮೆಯಿಂದ, ವಿಶಿಷ್ಟವಾಗಿ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಜೀವನದಲ್ಲಿ ಹೊಸ ಆರಂಭ ಪಡೆಯಲು ಇದು ಅದ್ಭುತವಾದ ಸಮಯವಾಗಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಡಿ ಒತ್ತುವರಿ: ಜಂಟಿ ಸಮೀಕ್ಷೆಗೆ ಖರ್ಗೆ ಆಗ್ರಹ
ಸಂಡೂರು ತಾಲೂಕಿನ ತುಮಟಿ ಗ್ರಾಮದ ಬಳಿ ಮೇಲ್ನೋಟಕ್ಕೆ ಸಾಬೀತಾಗಿದ್ದು, ಕೇಂದ್ರ ಸರ್ಕಾರದ ....
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಬಂಪರ್ ಕೊಡುಗೆ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಬಂಪರ್ ಕೊಡುಗೆ
ಮನರಂಜನೆ
ಚಿತ್ರ ಸುದ್ದಿ - ಒಂದು ಸಮಯದಲ್ಲಿ ನಿರ್ಮಾಪಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿದ್ದ ಗೋಲ್ಡನ್ ಸ್ವಾರ್ ಗಣೇಶ್‌ರ ಬೇಡಿಕೆ ಕಡಿಮೆಯಾಗಿದೆಯೇ? ಹೌದೆನ್ನುತ್ತದೆ ಗಾಂಧಿನಗರದ ಕೆಲ ಮೂಲಗಳು.
ಮುಂದೆ ಓದಿ|ಮತ್ತಷ್ಟು...