|
| ಪತಿ ಹತ್ಯೆಯಲ್ಲಿ ದೇಶಪಾಂಡೆ ಪಾತ್ರ: ಶುಭಲತಾ ವಾಗ್ದಾಳಿ |
| ಬೆಂಗಳೂರು, 13 ಅಕ್ಟೋಬರ್ 2008 ( 15:45 IST ) | |
ನನ್ನ ಪತಿಯ ಹತ್ಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಕೈವಾಡವಿರುವ ಶಂಕೆಯಿದೆ ಎಂದು ವಿಧಾನಪರಿಷತ್ ಸದಸ್ಯೆ ಶುಭಲತಾ ಆಸ್ನೋಟಿಕರ್ ಹೇಳಿದ್ದಾರೆ. ನಮ್ಮ ಕುಟುಂಬದೊಂದಿಗೆ ಅತ್ಯಂತ ನಿಕಟವಾಗಿದ್ದ ದೇಶಪಾಂಡೆಯವರು ದಿಲೀಪ್ ಹತ್ಯೆಯಲ್ಲಿ ನಮ್ಮ ಕುಟುಂಬದ ಪಾತ್ರವಿದೆ ಎಂದು ಈಗ ಹೇಳುತ್ತಿದ್ದಾರೆ.
ಅವರು ಈ ಹಿಂದೆ ಯಾಕೆ ಹೇಳಲಿಲ್ಲ ಎಂದು ಗಂಭೀರ ಪ್ರಶ್ನೆ ಎಸೆದಿರುವ ಶುಭಲತಾ, ಪಕ್ಷ ತೊರೆದು ಹೋದುದ್ದರಿಂದಲೇ ನನ್ನ ಮಗ ಆನಂದ ಆಸ್ನೋಟಿಕರ್ ಅವರ ವಿರುದ್ಧ ದೇಶಪಾಂಡೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರಕ್ಕಾಗಿ ಅನುಕೂಲಸಿಂಧು ರಾಜಕಾರಣ ಮಾಡುವ ದೇಶಪಾಂಡೆಯವರಿಂದ ಕಲಿಯಬೇಕಿರುವುದು ಏನೂ ಇಲ್ಲ. ಆನಂದ್ ಕಿರಿಯ ವಯಸ್ಸಿನಲ್ಲೇ ಸಚಿವನಾಗಿದ್ದಾನೆ ಎನ್ನುವ ಅಸೂಯೆಯಿಂದ ಕಾಂಗ್ರೆಸ್‌ನ ದೇಶಪಾಂಡೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷಾಂತರ ಸಂದರ್ಭದಲ್ಲಿ ನನ್ನ ಮೇಲೂ ಪ್ರಭಾವ ಬೀರಲು ಅವರು ಪರೋಕ್ಷವಾಗಿ ಪ್ರಯತ್ನಿಸಿದ್ದರು. ಆದರೆ ಅದು ಫಲ ನೀಡಲಿಲ್ಲ ಎಂದು ಆರೋಪಗಳ ಮಳೆಗರೆದರು.
ಈ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದಷ್ಟೇ ಆನಂದ್ ಪಕ್ಷಾಂತರ ಮಾಡಿದ್ದಾರೆಯೇ ಹೊರತು, ಯಾವುದೇ ಅಧಿಕಾರದ ಆಸೆಯಿಂದಲ್ಲ ಎಂದು ಇದೇ ಸಂದರ್ಭದಲ್ಲಿ ಶುಭಲತಾ ಸಮರ್ಥಿಸಿಕೊಂಡರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|