ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಆಸ್ತಿ ವಿವಾದ: ಸಚಿವ ಆಸ್ನೋಟಿಕರ್ ಸ್ಪಷ್ಟನೆ
ಬೆಂಗಳೂರು, ಸೋಮವಾರ, 13 ಅಕ್ಟೋಬರ್ 2008   ( 13:55 IST )
ಚುನಾವಣಾ ನಾಮಪತ್ರ ಸಲ್ಲಿಸುವಾಗ ಸರಿಯಾದ ಆಸ್ತಿ ವಿವರ ಒದಗಿಸಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಮೀನುಗಾರಿಕಾ ಮತ್ತು ವಿಜ್ಞಾನ- ತಂತ್ರಜ್ಞಾನ ಸಚಿವ ಆನಂದ ಆಸ್ನೋಟಿಕರ್ ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವರಣೆ ಸಚಿವರು, 1980 ರ ದಶಕದಲ್ಲಿ ಮುಂಡಗೇರಿಯ ಏಳು ಎಕರೆ ಭೂಮಿಯನ್ನು ತಮ್ಮ ತಂದೆ ವಸಂತ ಆಸ್ನೋಟಿಕರ್ ಮತ್ತು ಇತರರು ಸೇರಿ ಕಾರ್ಖಾನೆ ಆರಂಭಿಸುವ ಉದ್ದೇಶದಿಂದ ಜಮೀನು ನೋಂದಣಿ ಮಾಡಿಸಿದ್ದರು.

ಆದರೆ ಕೆಲವು ತೊಂದರೆಗಳು ಎದುರಾದ ಕಾರಣ ಕಾರ್ಖಾನೆ ಸಕಾಲದಲ್ಲಿ ಆರಂಭವಾಗುವುದು ಸಾಧ್ಯವಾಗಲಿಲ್ಲ. ತಂದೆಯವರ ನಿಧನದ ನಂತರ ನನಗೆ ಸಹಕಾರ ಇಲಾಖೆಯಿಂದ ನೋಟಿಸ್ ಬಂದಿತು. 2001ರಲ್ಲಿ ಬಾಕಿ ಹಣ ಪಾವತಿ ಮಾಡಿದಾಗ ಜಮೀನು ನನ್ನ ಸುಪರ್ದಿಗೆ ಬಂದಿತು.

ಆದರೆ ಆನಂತರ ಸಹಕಾರ ಸಂಘದ ಮಾಜಿ ಸದಸ್ಯರಾದ ಪ್ರಭಾಕರ ರಾಣೆ ಮತ್ತಿತರರು ಈ ವಿಷಯದಲ್ಲಿ ಸಹಕಾರ ಸಂಘಕ್ಕೆ ದೂರಿದಾಗ ವಿವಾದ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಬಂತು. ಜಮೀನಿನ ಕುರಿತು ವಿವಾದವಿದ್ದುದರಿಂದಲೇ ತಾವು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಾಗ ಈ ಜಮೀನಿನ ವಿವರ ನಮೂದಿಸಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಾಲು ವಿವಾದ: ತನಿಖೆಗೆ ಹೆದರುವುದಿಲ್ಲ- ರೇವಣ್ಣ
ಅಸ್ನೋಟಿಕರ್ ವಿರುದ್ಧ ಸ್ಪರ್ಧಿಸಲಿ: ದನಂಜಯ ಕುಮಾರ್
ಮೈತ್ರಿಗೆ ನಾವೂ ರೆಡಿ: ದೇಶಪಾಂಡೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಶೂಟೌಟ್ ಪ್ರಕರಣ: ಗೋವರ್ಧನ ಮ‌ೂರ್ತಿ ಬಂಧನ
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...