ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಶೂಟೌಟ್ ಪ್ರಕರಣ: ಗೋವರ್ಧನ ಮ‌ೂರ್ತಿ ಬಂಧನ
ಬೆಂಗಳೂರು, 11 ಅಕ್ಟೋಬರ್ 2008   ( 18:27 IST )
ಬಾಗಲೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ ಮ‌ೂರ್ತಿಯನ್ನು ಕೇರಳದ ಕೊಚ್ಚಿನ್‌ನಲ್ಲಿ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ.

ಈಶಾನ್ಯ ವಲಯದ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕೇರಳದ ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದ ಗೋವರ್ಧನ ಮ‌ೂರ್ತಿಯನ್ನು ಬಂಧಿಸಿದ್ದು, ಇಂದೇ ನಗರಕ್ಕೆ ತರಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಮಂಗಳವಾರದಿಂದ ಕೇರಳದಲ್ಲೇ ಅಡಗಿದ್ದ ಮ‌ೂರ್ತಿ ತನ್ನಲ್ಲಿದ್ದ ಹಣ ಖರ್ಚಾದ ಕೂಡಲೇ ತಾನೇ ನೇಮಿಸಿಕೊಂಡಿದ್ದ ಮ್ಯಾನೇಜರ್‌ಗೆ ಫೋನ್ ಮಾಡಿ 25 ಲಕ್ಷ ರೂ. ತರುವಂತೆ ಹೇಳಿದ್ದು, ಪೊಲೀಸರಿಗೆ ಬಂಧಿಸುವಲ್ಲಿ ಸಹಾಯವಾಯಿತು.

ಶೂಟೌಟ್ ನಡೆದ ಬಳಿಕ ಮ‌ೂರ್ತಿ ಮನೆ, ಕಚೇರಿ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿರುವ ಫೋನ್‌ಗಳ ಹೊರ ಹಾಗೂ ಒಳ ಬರುವ ಕರೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಮ್ಯಾನೇಜರ್ ಮಾಡಿದ ಕರೆ ಆಧರಿಸಿ ಕೇರಳಕ್ಕೆ ತೆರಳಿದ್ದರು.

ಗೋವರ್ಧನ ಮ‌ೂರ್ತಿ ತನ್ನ ಸ್ನೇಹಿತ ಹಾಗೂ ಸಹನಟ ವಿನೋದ್ ಕುಮಾರ್ ನನ್ನು ಇದೇ ತಿಂಗಳ 7ರಂದು ಗುಂಡಿಕ್ಕಿ ಕೊಲೆಗೈದ ಆರೋಪದಲ್ಲಿ ಭಾಗಿಯಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಹೊರವಲಯದಲ್ಲಿ ಡಕಾಯಿತಿ: 8 ಮಂದಿ ಬಂಧನ
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ಬಿಜೆಪಿ ಮಠವಾಗುತ್ತಿರುವ ರಾಮಚಂದ್ರ ಪುರ ಮಠ
ಭಯೋತ್ಪಾದಕ ನಂಟು: ನಾಲ್ವರು ಸ್ಥಳೀಯರ ವಿಚಾರಣೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...