ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಬೆಂಗಳೂರು, ಶನಿವಾರ, 11 ಅಕ್ಟೋಬರ್ 2008   ( 17:12 IST )
ಬಸವನಗುಡಿಯ ನಿವಾಸಿ ಅನ್ನಪೂರ್ಣೇಶ್ವರಿ ಎಂಬ 54 ವರ್ಷ ವಯಸ್ಸಿನ ಹಿರಿಯ ಮಹಿಳೆಯು ವಿವಿ ಸಮಾಜ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಭೀಕರವಾಗಿ ಕೊಲೆಯಾಗಿರುವುದು ಶುಕ್ರವಾರ ಪತ್ತೆಯಾಗಿದೆ. ಮೊಬೈಲ್ ಫೋನ್ ಚಾರ್ಜರ್‌ನಿಂದ ಅವರ ಕುತ್ತಿಗೆ ಹಿಸುಕಿ ಹತ್ಯೆಮಾಡಲಾಗಿದೆಯೆಂದು ಹೇಳಲಾಗಿದೆ.ಮನೆಕೆಲಸದ ಲಕ್ಷ್ಮಿ ಮನೆಯನ್ನು ಪ್ರವೇಶಿಸಿದಾಗ ಮಧ್ಯಾಹ್ನ 2ಗಂಟೆಗೆ ಅನ್ನಪೂರ್ಣೇಶ್ವರಿ ಸತ್ತುಬಿದ್ದಿರುವುದು ಪತ್ತೆಯಾಗಿತ್ತು.

ಅವರ ಪತಿ ಲಕ್ಷ್ಮಿಕಾಂತ್ ಬೆಳಗ್ಗೆ ಹೊರಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ದಂಪತಿ ನೆಲಮಹಡಿಯಲ್ಲಿ ವಾಸಿಸುತ್ತಿದ್ದರೆ, ಅನ್ನಪೂರ್ಣೇಶ್ವರಿ ಸೋದರಳಿಯ ಕಿರಣ್‌ಕುಮಾರ್ ಮತ್ತು ಅವರ ಕುಟುಂಬ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಸ್ವಂತ ಮಕ್ಕಳು ಇಲ್ಲದಿದ್ದ ಹಿನ್ನೆಲೆಯಲ್ಲಿ ಅರು ತಮ್ಮ ಸಂಬಂಧಿಗಳ ಮಕ್ಕಳಾದ ಮಂಜುನಾಥ್ ಮತ್ತು ಉಷಾರನ್ನು ದತ್ತುತೆಗೆದುಕೊಂಡಿದ್ದರು.

ಮಂಜುನಾಥ್ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಉಷಾ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.ಮಂಗಳಸೂತ್ರ, ಚಿನ್ನದ ಮ‌ೂಗುತಿ, ಕಿವಿಓಲೆ ಮುಂತಾದ ಆಭರಣಗಳು ನಾಪತ್ತೆಯಾಗಿರುವುದರಿಂದ ಇದು ಚಿನ್ನಾಭರಣಗಳ ಆಸೆಗಾಗಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಚಿನ್ನಾಭರಣಗಳನ್ನು ಕದ್ದಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೊರವಲಯದಲ್ಲಿ ಡಕಾಯಿತಿ: 8 ಮಂದಿ ಬಂಧನ
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ಬಿಜೆಪಿ ಮಠವಾಗುತ್ತಿರುವ ರಾಮಚಂದ್ರ ಪುರ ಮಠ
ಭಯೋತ್ಪಾದಕ ನಂಟು: ನಾಲ್ವರು ಸ್ಥಳೀಯರ ವಿಚಾರಣೆ
ದತ್ತ ಪ್ರವೇಶ ನಿಷೇಧಕ್ಕೆ ಜಿಲ್ಲಾಡಳಿತ ನಿರ್ದೇಶನ
ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...