ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಭಯೋತ್ಪಾದಕ ನಂಟು: ನಾಲ್ವರು ಸ್ಥಳೀಯರ ವಿಚಾರಣೆ
ಚಿಕ್ಕಮಗಳೂರು, ಶನಿವಾರ, 11 ಅಕ್ಟೋಬರ್ 2008   ( 16:16 IST )
ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರ ಮಹಮದ್ ಬಾವಾನೊಂದಿಗೆ ನಂಟು ಹೊಂದಿದ್ದಾರೆಂಬ ಅನುಮಾನದ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು ಸಿಸಿಬಿ ಪೊಲೀಸರು ಜಿಲ್ಲೆಯ ಕೊಪ್ಪ ಸಮೀಪದ ಕುದುರೆಗುಂಡಿಗೆ ಆಗಮಿಸಿದ್ದು, ಮಹಮದ್ ಬಾವಾ ನೆಲೆಸಿದ್ದ ವಿಟ್ಲಮಕ್ಕಿಗೆ ಹೊಂದಿಕೊಂಡಿರುವ ಕುದುರೆಗುಂಡಿಯ ಕುಂಜುಮೋನು, ಅಬುಬೇಕರ್, ಬದ್ರುದೀನ್, ಜಲೀಲ್ ರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಕಳೆದ ಮ‌ೂರು ವರ್ಷದಿಂದ ವಿಟ್ಲಮಕ್ಕಿಯಲ್ಲಿ ಮಹಮದ್ ಹಾಗೂ ಇಂಜಿನಿಯರ್ ಶೌಕತ್ ಆಗಾಗ ಬಂದು ವಾಸಿಸುತ್ತಿದ್ದನು. ಅಲ್ಲದೆ, ಈ ನಾಲ್ವರು ಸ್ಥಳಿಯರೊಂದಿಗಿನ ಒಡನಾಟ ವಿಶೇಷವಾಗಿತ್ತು ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿಗೂ ಉಗ್ರರ ಹಾವಳಿ ಹಬ್ಬಿರುವ ವದಂತಿಗಳು ಹರಿಡಿರುವ ಬೆನ್ನಲ್ಲೆ ಸ್ಥಳೀಯರ ಬಂಧನ ಜನತೆಯನ್ನು ಆತಂಕಕ್ಕೀಡು ಮಾಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದತ್ತ ಪ್ರವೇಶ ನಿಷೇಧಕ್ಕೆ ಜಿಲ್ಲಾಡಳಿತ ನಿರ್ದೇಶನ
ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಅಧ್ಯಕ್ಷರ ಹುಡುಕಾಟದಲ್ಲಿ ಜೆಡಿಎಸ್
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...