ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ದತ್ತ ಪ್ರವೇಶ ನಿಷೇಧಕ್ಕೆ ಜಿಲ್ಲಾಡಳಿತ ನಿರ್ದೇಶನ
ಚಿಕ್ಕಮಗಳೂರು, ಶನಿವಾರ, 11 ಅಕ್ಟೋಬರ್ 2008   ( 13:07 IST )
ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ದತ್ತಪೀಠ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧ ಮಾಡಿದೆ.ದತ್ತಪೀಠದ ಗುಹೆ ಕುಸಿದಿದ್ದು, ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಗುಹೆ ದುರಸ್ತಿಯಾಗದ ಹೊರತು ದತ್ತ ಪಾದುಕೆಗಳನ್ನು ಬೇರೆಡೆಗೆ ಪುನರ್ ಪ್ರತಿಷ್ಠಾಪನೆ ಮಾಡುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ವಿವಾದಿತ ಪ್ರದೇಶದ ಹೊರ ಭಾಗದಲ್ಲಿ ದತ್ತ ವಿಗ್ರಹ ಇಡಲು ಅವಕಾಶ ನೀಡಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಮಳೆಯಿಂದ ದತ್ತ ಪೀಠದ ಗುಹೆ ಕುಸಿದಿದೆ. ಈ ನಿಟ್ಟಿನಲ್ಲಿ ದತ್ತಪೀಠಕ್ಕೆ ನಿಷೇಧ ಹೇರಲಾಗಿದ್ದು, ಪ್ರವೇಶ ದ್ವಾರದಿಂದ ಪೀಠದ ಆವರಣ ಹಾಗೂ ಅದರ ಸುತ್ತಮುತ್ತಲೂ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಗುಹೆ ದುರಸ್ತಿ ಕಾರ್ಯ ಮುಗಿದು ಕನಿಷ್ಠ 4 ತಿಂಗಳಾದರೂ ಆ ಭಾಗದಲ್ಲಿ ಸಾರ್ವಜನಿಕರ ಓಡಾಟ ಇರಬಾರದು, ಅಲ್ಲಿವರೆಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಡಿಸೆಂಬರ್‌ನಲ್ಲಿ ನಡೆಯಲಿರುವ ದತ್ತ ಜಯಂತಿ ಸಂದರ್ಭದಲ್ಲಿ ಪ್ರವೇಶ ನಿಷೇಧ ಎಂಬ ಇಂಗಿತವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ಮೂಲಕ ದತ್ತಪೀಠದ ಆವರಣದೊಳಗೆ ದತ್ತ ಪಾದುಕೆ ಪ್ರತಿಷ್ಠಾಪನೆ ಮಾಡಿ, ಪೂಜೆಗೆ ಅವಕಾಶ ಸಿಗುವ ಹಿಂದೂ ಸಂಘಟನೆಗಳ ಬೇಡಿಕೆಗೆ ಜಿಲ್ಲಾಡಳಿತ ತಣ್ಣೀರು ಎರಚಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಅಧ್ಯಕ್ಷರ ಹುಡುಕಾಟದಲ್ಲಿ ಜೆಡಿಎಸ್
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೋಮು ಪ್ರಚೋದನೆ ಸಂಘಟನೆ ನಿಷೇಧಿಸಬೇಕು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...