|
| ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು |
| ಬೆಂಗಳೂರು, ಶುಕ್ರವಾರ, 10 ಅಕ್ಟೋಬರ್ 2008 ( 19:45 IST ) | |
ಒಂಭತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಆಯ್ಕೆಗೆ ಇದೀಗ ಮುಕ್ತಿ ದೊರೆಯಿತು ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಕೆಪಿಸಿಸಿ ಪುನರ್ ರಚನೆಯ ವಿಷಯ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ 454 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 30 ಜಿಲ್ಲಾ ಕಾಂಗ್ರೆಸ್ ಸಮಿತಿ, 54 ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳು ಸೇರಿದಂತೆ ಹಲವು ಹುದ್ದೆಗಳನ್ನು ಪುನರ್ ರಚಿಸುವ ಜವಾಬ್ದಾರಿ ಅಧ್ಯಕ್ಷ ಆರ್. ವಿ. ದೇಶಪಾಂಡೆ ಹೆಗಲಿಗೆ ಬಿದ್ದಿದೆ.
ಈ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದ ಜನಾರ್ಧನ ಪೂಜಾರಿ ಇರುವಾಗಲೂ ಸಮಿತಿ ಪುನರ್ ರಚನೆ ಮಾಡಿರಲಿಲ್ಲ. ಬಳಿಕ ಮಲ್ಲಿಕಾರ್ಜು ಖರ್ಗೆ ಕೂಡ ಯಾವ ಬದಲಾವಣೆಯನ್ನೂ ಮಾಡದೇ ಯಥಾಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ಹಲವು ಬಾರಿ ಕೆಪಿಸಿಸಿ ಪುನರ್ ರಚನೆ ಪಟ್ಟಿ ಹಲವಾರು ಬಾರಿ ಹೈಕಮಾಂಡ್‌ಗೆ ತಲುಪಿದ್ದರೂ ಅನುಮತಿ ದೊರೆತಿರಲಿಲ್ಲ. ಇದೀಗ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಕಾರ್ಯಕರ್ತರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಹೊಸ ಮುಖಗಳಿಗೆ, ಮಹಿಳೆಯರಿಗೆ, ಯುವಕರಿಗೆ ಪಕ್ಷದಲ್ಲಿ ಆದ್ಯತೆ ನೀಡುವ ಮೂಲಕ ಕೆಪಿಸಿಸಿ ಪುನರಾಚನೆ ನಡೆಯಲಿದೆ ಎಂಬುದು ಮುಖಂಡರ ಅಂಬೋಣ. ಆದರೆ ಇದು ಕಷ್ಟ ಸಾಧ್ಯ. ಈಗಾಗಲೇ ಪಕ್ಷದಲ್ಲಿ ಹಲವು ಸಮಸ್ಯೆಗಳು ತಲೆದೋರಿದೆ. ಅವುಗಳ ಮಧ್ಯೆ ಚುನಾವಣೆ ಕೂಡ ಸಮೀಪಿಸುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|