|
| ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ |
| ಶಿವಮೊಗ್ಗ, ಶುಕ್ರವಾರ, 10 ಅಕ್ಟೋಬರ್ 2008 ( 19:31 IST ) | |
ವಿಧಾನಸಭಾ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಸಮಾಜವಾದಿ ಪಕ್ಷ ಲೋಕಸಭಾ ಚುನಾವಣೆಯತ್ತ ದೃಷ್ಟಿ ನೆಟ್ಟಿದ್ದು, ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿದೆ.ಈ ವಿಷಯವನ್ನು ಇಂದು(ಶುಕ್ರವಾರ) ಸ್ಪಷ್ಟಪಡಿಸಿದ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್. ಬಂಗಾರಪ್ಪ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರವನ್ನು ಸಮಾಜವಾದಿ ಪಕ್ಷಕ್ಕೆ ಬಿಟ್ಟುಕೊಡುವಂತೆ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಕಾರವಾರ, ಹಾವೇರಿ, ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗ ಈ ಕ್ಷೇತ್ರಗಳಾಗಿವೆ ಎಂದು ವಿವರಿಸಿದರು.
ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದ ಬಂಗಾರಪ್ಪ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|