ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕೋಮು ಪ್ರಚೋದನೆ ಸಂಘಟನೆ ನಿಷೇಧಿಸಬೇಕು
ಬೆಂಗಳೂರು, ಶುಕ್ರವಾರ, 10 ಅಕ್ಟೋಬರ್ 2008   ( 19:29 IST )
ದೇಶದ ಹಿತಕ್ಕೆ ಧಕ್ಕೆ ತರುವಂತಹ ಯಾವುದೇ ಸಂಘಟನೆಗಳನ್ನು ನಿಷೇಧಿಸಬೇಕೆಂಬ ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮುಮ್ತಾಜ್ ಆಲಿ ಖಾನ್ ಹೇಳಿಕೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ನಗರದಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಸಿಮಿ ಸಂಘಟನೆಯಾಗಲಿ ಅಥವಾ ಭಜರಂಗದಳವೇ ಆಗಿರಲಿ ದೇಶಕ್ಕೆ ಅಪಾಯ ತರುವಂತದ್ದಾದರೆ ನಿಷೇಧಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಚರ್ಚ್‌ಗಳ ಮೇಲೆ ದಾಳಿ ನಡೆದ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಅಲ್ಪಸಂಖ್ಯಾತರ ಆಯೋಗ ಪಕ್ಷಾತೀತವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದ ಅವರು, ಏಕಪಕ್ಷೀಯವಾಗಿ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿದೆ ಎಂದು ಆರೋಪಿಸಿದರು.

ಈ ತಿಂಗಳ 13ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಿಯ ಭಾವೈಕ್ಯತಾ ಸಮಿತಿ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಲ್ಪಸಂಖ್ಯಾತರ ಆಯೋಗದ ವರ್ಚಸ್ಸು ಹಾಗೂ ಕೋಮುಸೌಹಾರ್ದ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಸೆಳೆಯುವುದಾಗಿ ಅವರು ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಯೋತ್ಪಾದನೆ ಕುರಿತು ಕಠಿಣ ನಿಲುವು: ಸಿಎಂ
ಕರುಣಾಕರ ರೆಡ್ಡಿಯಿಂದ ವೆಂಕಟೇಶ್ವರನಿಗೆ ಚಿನ್ನದ ಪಾದುಕೆ
ಶಾಲಾ ಮಟ್ಟದಲ್ಲೇ ಧಾರ್ಮಿಕ ಸಾಮರಸ್ಯಕ್ಕೆ ಉತ್ತೇಜನ
ಮೈಲಾರಪ್ಪ ವಿರುದ್ಧ ದೂರು ದಾಖಲು
ಬಿಬಿಎಂಪಿ ಚುನಾವಣೆ ವಿಳಂಬ: ಜನತಾದಳ ಟೀಕೆ
ಉಪಚುನಾವಣೆಯಿಂದ ದೂರ: ಬಂಗಾರಪ್ಪ
ಗ್ರಹ ಗತಿ
ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸಿಗರ ವಿರುದ್ಧ ಹೇಳಿಕೆ ನೀಡಿದ ಖರ್ಗೆಗೆ ನೋಟಿಸ್
ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ...
31ರಂದು 3 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ
ಭದ್ರತೆಯ ನಡುವೆ ಜಂಬೂ ಸವಾರಿಗೆ ಕ್ಷಣಗಣನೆ
ಮನರಂಜನೆ
ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ
ಮುಂದೆ ಓದಿ|ಮತ್ತಷ್ಟು...