|
| 31ರಂದು 3 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ |
| ಬೆಂಗಳೂರು, ಮಂಗಳವಾರ, 7 ಅಕ್ಟೋಬರ್ 2008 ( 20:09 IST ) | |
ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಮೂರು ವಿಧಾನ ಪರಿಷತ್ ಸ್ಥಾನಗಳಿಗೆ ಇದೇ ತಿಂಗಳ 31ರಂದು ಚುನಾವಣೆ ನಡೆಯಲಿದೆ.ಧಾರವಾಡ, ಕೊಡಗು ಮತ್ತು ಬೆಳಗಾವಿಯ ಸ್ಥಳೀಯ ಸಂಸ್ಥೆಯ ಮೂರು ವಿಧಾನ ಪರಿಷತ್ ಕ್ಷೇತ್ರಗಳಿಗೆ 31ರಂದು ಮತದಾನ ನಡೆಯಲಿದ್ದು, ನವೆಂಬರ್ ಮೂರರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಡಿ. ವಿದ್ಯಾಶಂಕರ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ನಾಮಪತ್ರ ಸಲ್ಲಿಸಲು ಇದೇ 14ರಂದು ಕೊನೆ ದಿನವಾಗಿದ್ದು, ನಾಮಪತ್ರ ಪರಿಶೀಲನೆ 15ರಂದು ನಡೆಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು 17 ಕಡೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
ಹಾಲಿ ಸಚಿವರಾದ ಬಸವರಾಜ ಬೊಮ್ಮಯಿ(ಧಾರವಾಡ), ಸಿ.ಎಸ್. ಅರುಣ್ ಮಾಚಯ್ಯ(ಕೊಡಗು) ಮತ್ತು ಸತೀಶ್ ಜಾರಕಿಹೊಳಿ(ಬೆಳಗಾವಿ) ಅವರುಗಳು ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಅದರಲ್ಲೂ ಸಂತೋಷ ಕಾಣುವವರಿರಬಹುದು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ‘ಸಂಗಮ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತೀಚೆಗೆ ಬೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಜಗಮಗಿಸಿ ಭವ್ಯವಾದ ಆಸನದೊಂದಿಗೆ ಕಂಗೊಳಿಸುತಿತ್ತು. ಜಂಕರ್ ಆಡಿಯೋ ಹೊರತಂದಿರುವ ಸಂಗಮ ಚಿತ್ರದ ಧ್ವನಿ ಸುರುಳಿಯನ್ನು ನಿರ್ಮಾಪಕಿ ಪಾರ್ವತಮ್ಮ |
| |
|
|
|
|
|
|
|