|
| ಭದ್ರತೆಯ ನಡುವೆ ಜಂಬೂ ಸವಾರಿಗೆ ಕ್ಷಣಗಣನೆ |
| ಮೈಸೂರು, ಮಂಗಳವಾರ, 7 ಅಕ್ಟೋಬರ್ 2008 ( 20:01 IST ) | |
ಇದೇ ಗುರುವಾರದಂದು ಆರಂಭಗೊಳ್ಳಲಿರುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಸಾಂಸ್ಕೃತಿಕ ನಗರಿ ಸರ್ವ ರೀತಿಯಲ್ಲಿಯೂ ಸಜ್ಜುಗೊಂಡಿದೆ.ಜಿಲ್ಲಾಡಳಿತ ಭರದಿಂದ ದಸರಾ ಸಿದ್ಧತೆಗಳನ್ನು ಕೈಗೊಂಡಿದ್ದು, ಈಗಾಗಲೇ ಕೆಲವು ಸಿದ್ದತಾ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಗುರುವಾರದಂದು ಮಧ್ಯಾಹ್ಯ 12.39ಕ್ಕೆ ಸರಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಜಂಬೂ ಸವಾರಿ ಸಾಗುವ ಅರಮನೆ ಮುಂಭಾಗದ ರಸ್ತೆ, ಕೆ.ಆರ್. ವೃತ್ತ, ಬನ್ನಿಮಂಟಪ ಸೇರುವ ಸಯ್ಯಾಜಿರಾವ್ ರಸ್ತೆಗಳಲ್ಲಿ ಭರದಿಂದ ಸಿದ್ದತಾ ಕಾರ್ಯಗಳು ನಡೆಯುತ್ತಿದೆ.
ಇದೇ ಸಂದರ್ಭದಲ್ಲಿ ಸಂಸ್ಕೃತಿ, ಸಂಪ್ರದಾಯಗಳ ಕುರಿತು ತಿಳಿಸುವ ಶಬ್ದ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಭೋಫೋರ್ಸ್ ಫಿರಂಗಿ, ಟ್ಯಾಂಕರ್‌ಗಳು ಸೇರಿದಂತೆ ಹಲವು ಪ್ರಕಾರಗಳು ಪ್ರದರ್ಶನಗೊಳ್ಳಲಿದೆ.
ಅಭೂತ ಪೂರ್ವ ಭದ್ರತೆ:
ಭಯೋತ್ಪಾದಕರ ಕರಿ ನೆರಳು ಆವರಿಸಿರುವ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತೆಯನ್ನು ಕಲ್ಪಿಸಿರುವ ಪೊಲೀಸ್ ಇಲಾಖೆ, ಎಲ್ಲಾ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಎರಡು ದಿನ ಮುಂಚಿತವಾಗಿಯೇ ಮೈಸೂರು ನಗರದ ಪ್ರಮುಖ ತಾಣಗಳನ್ನು ಹೈದರಾಬಾದ್ ಮತ್ತು ದೆಹಲಿ ರಾಜ್ಯಗಳ ಪರಿಣಿತ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ತಂಡ ವಶಕ್ಕೆ ತೆಗೆದುಕೊಂಡಿದ್ದು, ಎಲ್ಲೆಡೆ ಬಿಗಿ ಪಹರೆಯನ್ನು ಕಾಣಬಹುದಾಗಿದೆ.
ವಿಶ್ವ ವಿಖ್ಯಾತ ಅರಮನೆಗಂತೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಅರಮನೆಯ ಸುತ್ತಲೂ ಶಸ್ತ್ರಧಾರಿ ಪೊಲೀಸರು ಕಾವಲು ಇಡಲಾಗಿದ್ದು, ಎಲ್ಲಾ ಕಡೆಗಳಲ್ಲಿಯೂ ರಹಸ್ಯ ಕ್ಯಾಮೆರಾಗಳನ್ನು ಜೋಡಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಅದರಲ್ಲೂ ಸಂತೋಷ ಕಾಣುವವರಿರಬಹುದು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ‘ಸಂಗಮ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತೀಚೆಗೆ ಬೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಜಗಮಗಿಸಿ ಭವ್ಯವಾದ ಆಸನದೊಂದಿಗೆ ಕಂಗೊಳಿಸುತಿತ್ತು. ಜಂಕರ್ ಆಡಿಯೋ ಹೊರತಂದಿರುವ ಸಂಗಮ ಚಿತ್ರದ ಧ್ವನಿ ಸುರುಳಿಯನ್ನು ನಿರ್ಮಾಪಕಿ ಪಾರ್ವತಮ್ಮ |
| |
|
|
|
|
|
|
|