|
| ಭುಗಿಲೆದ್ದ ಮತಾಂತರ ವಿವಾದ: 3 ಚರ್ಚ್‌ಗಳಿಗೆ ಬೀಗ |
| ದಾವಣಗೆರೆ, ಭಾನುವಾರ, 7 ಸೆಪ್ಟೆಂಬರ್ 2008 ( 15:16 IST ) | |
ಜಿಲ್ಲೆಯಲ್ಲಿ ಮತಾಂತರ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರಾರ್ಥನಾ ಮಂದಿರಗಳಲ್ಲಿ ಮತಾಂತರ ನಡೆಯುತ್ತಿರುವುದನ್ನು ಖಂಡಿಸಿ ಇಂದು(ಭಾನುವಾರ) ಹಿಂದೂಪರ ಕಾರ್ಯಕರ್ತರು ಮೂರು ಚರ್ಚ್‌ಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಜಿಲ್ಲೆಯ ಬಾಡ ಗ್ರಾಮದ ಚರ್ಚ್ ಮೇಲೆ ದಾಳಿ ನಡೆಸಿದ ಕಾರ್ಯಕರ್ತರು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮತಾಂತರ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಪರ ಸಂಘಟನೆಗಳು ಮನವಿ ಮಾಡಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ 180ಕ್ಕೂ ಹೆಚ್ಚಿನ ಕ್ರೈಸ್ತರ ಪ್ರಾರ್ಥನ ಮಂದಿರಗಳು ತಲೆ ಎತ್ತಿವೆ.
ಅವುಗಳಲ್ಲಿ ಕೇವಲ 60 ಪ್ರಾರ್ಥನ ಮಂದಿರಗಳು ಅಧಿಕೃತವಾಗಿದ್ದು, ಉಳಿದವು ಅನಧಿಕೃತವಾಗಿದೆ ಎಂಬುದು ಹಿಂದೂ ಪರ ಸಂಘಟನೆಗಳ ಆರೋಪವಾಗಿದೆ. ಜಿಲ್ಲಾಡಳಿತ ಮುಂದೆ ಬಂದು ಕ್ರಮ ಕೈಗೊಳ್ಳಬೇಕೆಂಬ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಹಿಂದೂ ಪರ ಸಂಘಟನೆಗಳು ಇಂದು ತೀವ್ರ ಪ್ರತಿಭಟನೆ ನಡೆಸಿದೆ.ಈ ಮೊದಲು ಜಿಲ್ಲೆಯಲ್ಲಿ ಮತಾಂತರ ವಿವಾದವನ್ನು ವಿರೋಧಿಸಿ ಮಠಾಧೀಶರು ಸೇರಿದಂತೆ ಹಲವು ಮುಖಂಡರು ಬೀದಿಗಿಳಿದು ಹೋರಾಟ ನಡೆಸಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ |
| |
|
|
|
|
|
|
|