ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಮಠಗಳಿಗೆ ಸರ್ಕಾರಿ ಭೂಮಿ: ಸಿದ್ದರಾಮಯ್ಯ ಆಕ್ರೋಶ
ಚಾಮರಾಜನಗರ, 7 ಸೆಪ್ಟೆಂಬರ್ 2008   ( 13:02 IST )
ಶ್ರೀರಾಮಚಂದ್ರ ಮಠ ಸೇರಿದಂತೆ ರಾಜ್ಯದ ಮಠಗಳಿಗೆ ಸರ್ಕಾರಿ ಜಮೀನನ್ನು ನೀಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ವಿರೋಧಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೃತ್ ಮಹಲ್ ಹಾಗೂ ಹಳ್ಳಿಕಾರ್ ಹಸುಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬೆಲೆ ಬಾಳುತ್ತಿದ್ದವು. ಇಂತಹ ತಳಿಗಳನ್ನು ಸಂರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಈ ತಳಿಗಳ ಅಭಿವೃದ್ಧಿಗೆ ಖಾಸಗಿ ಮಠಕ್ಕೆ ವಹಿಸುವುದಕ್ಕಾಗಿ ಸರ್ಕಾರಿ ಜಮೀನನ್ನು ನೀಡುವ ಸರ್ಕಾರದ ನಿರ್ಧಾರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಈಗಾಗಲೇ ಸರ್ಕಾರ ದೇವಸ್ಥಾನಗಳನ್ನು ಖಾಸಗಿ ಮಠಕ್ಕೆ ವಶಕ್ಕೆ ನೀಡಿ ವಿವಾದವೆಬ್ಬಿಸಿದೆ. ಈ ಬಗ್ಗೆ ಕಾಂಗ್ರೆಸ್ ತೀವ್ರ ಹೋರಾಟವನ್ನು ಆರಂಭಿಸಿದೆ. ಈ ಹಂತದಲ್ಲಿಯೇ ಸರ್ಕಾರ ಮಠಗಳಿಗೆ ಸರ್ಕಾರಿ ಜಮೀನುನ್ನು ನೀಡುತ್ತಿದೆ. ಇದನ್ನು ನೋಡಿದರೆ ಸರ್ಕಾರ ಯಾರ ಪರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ದೂರಿದರು.

ಇದೇ ವೇಳೆ ಸರ್ಕಾರದ ನೂರು ದಿನಗಳ ಸಾಧನೆ ಕುರಿತು ಕಿಡಿಕಾರಿದ ಅವರು, ರಾಜ್ಯದ 84 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಗೊಬ್ಬರ ಕೇಳಿದ ರೈತನಿಗೆ ಸರ್ಕಾರ ಗೋಲಿಬಾರ್ ನಡೆಸಿದೆ. ಇದ್ಯಾವುದಕ್ಕೂ ಗಮನ ನೀಡದ ಸರ್ಕಾರ ಇದೀಗ ನೂರರ ಸಂಭ್ರಮವನ್ನು ಆಚರಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ದೂರಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಸಗೊಬ್ಬರ ನೀತಿಯಲ್ಲಿ ತಾರತಮ್ಯ: ಯಡಿಯ‌ೂರಪ್ಪ ಆರೋಪ
ವಲಸಿಗರಿಗೆ ಪಟ್ಟ ಬೇಡ: ಹಿರಿಯ ನಾಯಕರ ಪಟ್ಟು
ಸೆ.12-14: ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ವರ್ಗಾವಣೆ ದಂಧೆಯಲ್ಲಿ ಸರ್ಕಾರ: ಕುಮಾರಸ್ವಾಮಿ
ವಿಚಾರಣೆಗೆ ಗೌರಿಶಂಕರ ಶ್ರಿ ಹಾಜರು
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...