ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008   ( 17:20 IST )
ಸಿಸಿಬಿ ಪೊಲೀಸರು ಬೆಂಗಳೂರಿನ 3 ಕಡೆ ದಾಳಿ ನಡೆಸಿ 30 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಮದ್ಯ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಜರಾಜೇಶ್ವರಿ ನಗರದ ಜಯಣ್ಣ ವೃತ್ತದ ಬಳಿಯ ವಡೇರಹಳ್ಳಿ ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಮತ್ತು ಇನೋವಾ ಕಾರನ್ನು ಅಡ್ಡಗಟ್ಟಿದ ಪೊಲೀಸರು, ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡರು.

ಇವರಿಂದ ಮಾಹಿತಿ ಪಡೆದ ನಂತರ ರಾಮಸಂದ್ರದ ಶಿವಕುಮಾರ್‌ಗೆ ಸೇರಿದ ಗೋದಾಮು ಮತ್ತು ಆನೇಕಲ್ಲು ತಾಲೂಕಿನ ಮಗ್ಗನದೊಡ್ಡಿ ಕಟ್ಟಡವೊಂದರ ಮೇಲೆ ದಾಳಿ ಮಾಡಿ ಒಟ್ಟು 30 ಲಕ್ಷ ರೂ. ಬೆಲೆಯ ಒಂದು ಟೆಂಪೋ ಟ್ರಾವೆಲರ್ ವಾಹನ, ಒಂದು ಇನೋವಾ ಕಾರು, ನಕಲಿ ರಾಜಾ ವಿಸ್ಕಿ, ಒರಿಜಿನಲ್ ಚಾಯ್ಸ್, ಸೂಪರ್ ಪ್ಯಾಕ್ನ ಒಟ್ಟು 98 ಬಾಕ್ಸ್‌ಗಳು, ಲಕ್ಷಾಂತರ ನಕಲಿ ಮುಚ್ಚಳಗಳು, ಇಲಾಖೆಯ ನಕಲಿ ಲೇಬಲ್‌ಗಳು, 3 ಸಾವಿರ ಲೀಟರ್ ಮದ್ಯಸಾರ ಕ್ಯಾನ್‌ಗಳು, ಸಿಂಟ್ರೆಕ್ಸ್ ಟ್ಯಾಂಕ್‌ಗಳು ಇತ್ಯಾದಿ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದರೊಂದಿಗೆ ಬೆಂಗಳೂರು ಆಸುಪಾಸಿನಲ್ಲಿ ನಡೆಯುತ್ತಿದ್ದ ನಕಲಿ ಮದ್ಯ ತಯಾರಿಕೆಯ ಬೃಹತ್ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವರ್ಗಾವಣೆ ದಂಧೆಯಲ್ಲಿ ಸರ್ಕಾರ: ಕುಮಾರಸ್ವಾಮಿ
ವಿಚಾರಣೆಗೆ ಗೌರಿಶಂಕರ ಶ್ರಿ ಹಾಜರು
ಹಾಲಿನ ದರ ಮತ್ತೆ ಏರಿಕೆ ಸಾಧ್ಯತೆ?
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಕಿವುಡು ಮಕ್ಕಳ ಬಾಳಿಗೆ ಬೆಳಕು ಮ‌ೂಡಿಸುವ ಸಂಸ್ಥೆ
ನಂದಿನಿ ಹಾಲು ಲೀ.ಗೆ ಎರಡು ರೂ ಹೆಚ್ಚಳ ಸಂಭವ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...