ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಿವುಡು ಮಕ್ಕಳ ಬಾಳಿಗೆ ಬೆಳಕು ಮ‌ೂಡಿಸುವ ಸಂಸ್ಥೆ
ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008   ( 15:06 IST )
ತಮ್ಮ ಇಬ್ಬರು ಮಕ್ಕಳೂ ಜನ್ಮತಃ ಕಿವುಡರೆಂದು ವಿಜಯ ಅವರಿಗೆ ಅರಿವಾದಾಗ ಅಸಹಾಯಕತೆಯ ಭಾವನೆ ಮ‌ೂಡಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾದರು. ಆದರೆ ಶ್ರವಣದೋಷಿ ಮಕ್ಕಳಿಗೆ ಮತ್ತು ತಾಯಿಗೆ ಚಿಕಿತ್ಸೆ ನೀಡುವ ಸಂಸ್ಥೆಯೊಂದರ ಹೆಸರು ಕೇಳಿದ ಬಳಿಕ ಅವರ ಜೀವನ ಹೊಸ ತಿರುವು ಪಡೆಯಿತು. ಇಂದು ಆಕೆ ಮುಖ್ಯವಾಹಿನಿಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗಿದೆ. ಸಂಸ್ಥೆಯ ತರಬೇತಿದಾರರಲ್ಲಿ ಅವರೂ ಕೂಡ ಒಬ್ಬರಾಗಿದ್ದಾರೆ.

ರೋಟರಿ ವೆಸ್ಟ್ ಮತ್ತು ಕಿವುಡು ಮಕ್ಕಳ ಟ್ರಸ್ಟ್‌ನ ಪೋಷಕರ ಒಕ್ಕೂಟ ನಡೆಸುವ ತಾಯಿ ಮತ್ತು ಕಿವುಡು ಮಗುವಿನ ಸಂಸ್ಥೆಯಲ್ಲಿ ತಾಯಿ ಸಹ ಶಾಲೆಗೆ ಮಗುವಿನ ಜತೆಗೂಡುತ್ತಾರೆ. ಇಲ್ಲಿ ಮಕ್ಕಳನ್ನು ಒಂದು ವರ್ಷ ಮುಂಚೆಯೇ ನೋಂದಣಿಮಾಡಿಸಲಾಗುತ್ತದೆ. ನಾಲ್ಕು ವರ್ಷಗಳುದ್ದಕ್ಕೂ ತಾಯಿ ಶಾಲೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ಇರಬೇಕಾಗುತ್ತದೆ ಟ್ರಸ್ಟ್ ಅಧ್ಯಕ್ಷೆ ರತ್ನಾ ಶೆಟ್ಟಿ ಪುತ್ರನಿಗೆ ಕೂಡ ಕಿವುಡು.

ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದ ಅವರ ಪುತ್ರ ಎಂಜಿನಿಯರಿಂಗ್ ಶಿಕ್ಷಣದ ಬಳಿಕ ಅಮೆರಿಕದಲ್ಲಿ ಮಾಸ್ಟರ್ಸ್ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳು ಶ್ರವಣದೋಷದಿಂದ ಜನಿಸಿದ್ದಾರೆಂದು ತಿಳಿದ ಕೂಡಲೇ ಪೋಷಕರಿಗೆ ಖಿನ್ನತೆ ಆವರಿಸುತ್ತದೆ ಮತ್ತು ನಿರಾಶೆ ಅನುಭವಿಸುತ್ತಾರೆ.

ಇಲ್ಲಿ ಕಲಿಯುವ ಮಕ್ಕಳು ಸಾಮಾನ್ಯ ಜೀವನ ನಡೆಸುತ್ತಿರುವುದನ್ನು ನೋಡಿ ಕಿವುಡು ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆಯ‌ೂ ಮಹತ್ತರವಾದುದನ್ನು ಕನಸು ಕಾಣಲು ಸ್ಫೂರ್ತಿ ಸಿಕ್ಕುತ್ತದೆ ಎಂದು ರತ್ನಾ ಶೆಟ್ಟಿ ಹೇಳುತ್ತಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಂದಿನಿ ಹಾಲು ಲೀ.ಗೆ ಎರಡು ರೂ ಹೆಚ್ಚಳ ಸಂಭವ
32 ಆಯುರ್ವೇದಿಕ್ ಕಾಲೇಜುಗಳ ಅನುಮತಿ ರದ್ದು
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
ಹಾಲಿನ ಪ್ರೋತ್ಸಾಹ ಧನ ಇಲ್ಲ: ರೇವೂ ಸ್ಪಷ್ಟನೆ
ಹೈಕಮಾಂಡ್ ಬುಲಾವ್: ದೆಹಲಿಗೆ ದೌಡಾಯಿಸಿದ ಧರಂ
ನೂರರ ಸಂಭ್ರಮಾಚಾರಣೆ: ಸ್ವಕ್ಷೇತ್ರಕ್ಕೆ ಮುಖ್ಯಮಂತ್ರಿಗಳು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...