|
| ನಂದಿನಿ ಹಾಲು ಲೀ.ಗೆ ಎರಡು ರೂ ಹೆಚ್ಚಳ ಸಂಭವ |
| ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008 ( 15:01 IST ) | |
ಶಾಸಕ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಸೆ.12ರಂದು ನಡೆಯುವ ಕರ್ನಾಟಕ ಹಾಲು ಒಕ್ಕೂಟದ ಸರ್ವಪಕ್ಷಗಳ ಸಭೆಯು ಸರ್ಕಾರದ ತಡೆಯಾಜ್ಞೆಯನ್ನು ಧಿಕ್ಕರಿಸಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ಎರಡು ರೂ. ಹೆಚ್ಚಿಸುವುದೆಂದು ನಿರೀಕ್ಷಿಸಲಾಗಿದೆ. ಇದರಿಂದಾಗಿ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿ 100 ದಿನಗಳನ್ನು ಪೂರೈಸುವ ಹೊತ್ತಿನಲ್ಲಿ ಕೆಎಂಎಫ್ ಮತ್ತು ಸರ್ಕಾರದ ನಡುವೆ ಜಟಾಪಟಿ ಆರಂಭವಾಗಿದೆ.
ಕಳೆದ ಬಾರಿ ಹಾಲಿನ ದರವನ್ನು ಏರಿಸಿದಾಗ ಈ ಕ್ರಮವು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಎಂದು ಸರ್ಕಾರ ಹೇಳಿತ್ತು. ಈ ಬಾರಿ ರೇವಣ್ಣ ಸರ್ಕಾರಕ್ಕೆ ಮನದಟ್ಟು ಮಾಡಲು ಬಲವಾದ ಆಧಾರ ಮಂಡಿಸಲಿದ್ದಾರೆ.
ಹಾಲು ಉತ್ಪಾದಕರಿಗೆ 2 ರೂ.ಪ್ರೋತ್ಸಾಹಧನದಿಂದ ಹಾಲಿನ ಸಂಗ್ರಹ ಹೆಚ್ಚಲಿದ್ದು, ಆರ್ಥಿಕ ನಷ್ಟ ಉಂಟಾಗುತ್ತದೆಂದು ಕೆಎಂಎಫ್ ಭಾವಿಸಿದೆ. ಪ್ರಸಕ್ತ ಕೆಎಂಎಫ್ 32 ಲಕ್ಷ ಲೀಟರ್ ಹಾಲು ಸಂಗ್ರಹಿಸಿ 26 ಲಕ್ಷ ಲೀಟರ್ ಮಾರಾಟ ಮಾಡುತ್ತಿದೆ. ಆರ್ಥಿಕ ಪ್ರೋತ್ಸಾಹಕಗಳಿಂದ ಹಾಲಿನ ಸಂಗ್ರಹಣೆ 8 ಲಕ್ಷ ಲೀಟರ್ ಹೆಚ್ಚಲಿದ್ದು ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆಂದು ಮೂಲಗಳು ಹೇಳಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|