ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
ಮೈಸೂರು, 6 ಸೆಪ್ಟೆಂಬರ್ 2008   ( 12:47 IST )
ನಾಡಹಬ್ಬ ದಸರಾ ಮಹೋತ್ಸವದಲ್ಲಿ ರೈತ ದಸರಾ, ಮಹಿಳಾ ದಸರಾದ ಜೊತೆಗೆ ಏರ್‌ಶೋ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಘೋಷಿಸಿದ್ದಾರೆ.

ನಗರದಲ್ಲಿ ಪತ್ರಿಕಾ ಸಂವಾದದಲ್ಲಿ ಈ ವಿಷಯ ಪ್ರಕಟಿಸಿದ ಅವರು, ದಸರಾ ಮಹೋತ್ಸವದ ವೇಳೆ ಏರ್ ಶೋ ಪ್ರದರ್ಶನ ನಡೆಸಿಕೊಡುವಂತೆ ಈಗಾಗಲೇ ಏರ್ ಚೀಫ್ ಕಮಾಂಡೆಂಟ್ ಅವರನ್ನು ಕೋರಲಾಗಿದೆ ಎಂದು ವಿವರಿಸಿದರು.

ಮಹಿಳಾ ದಸರಾ ಉತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ವಿಶೇಷ ಪ್ರತಿಭೆ ಇರುವ ಮಹಿಳಾ ಕಲಾವಿದರನ್ನು ಆಹ್ವಾನಿಸಿ ಅವರ ಮೂಲಕ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ, ರಾಜ್ಯದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿರುವುದರಿಂದ ದಸರಾ ಮಹೋತ್ಸವದಲ್ಲಿ ವಿಧ್ವಂಸಕ ಕೃತ್ಯ ತಡೆಯುವಿಕೆಗೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಲ್ಲಲ್ಲಿ, ಗೋಪ್ಯ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗುವುದು ಎಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಾಲಿನ ಪ್ರೋತ್ಸಾಹ ಧನ ಇಲ್ಲ: ರೇವೂ ಸ್ಪಷ್ಟನೆ
ಹೈಕಮಾಂಡ್ ಬುಲಾವ್: ದೆಹಲಿಗೆ ದೌಡಾಯಿಸಿದ ಧರಂ
ನೂರರ ಸಂಭ್ರಮಾಚಾರಣೆ: ಸ್ವಕ್ಷೇತ್ರಕ್ಕೆ ಮುಖ್ಯಮಂತ್ರಿಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಜನತಾ ಮುಖಂಡರಿಗೆ ಪಕ್ಷಕ್ಕೆ ಆಹ್ವಾನ: ಮೆರಾಜುದ್ದೀನ್
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...