ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಪಾಜಕದ ಅಭಿವೃದ್ದಿಗೆ ಕಾಣಿಯೂರು ಮಠ ಮುಂದು
ಬೆಂಗಳೂರು, ಬುಧವಾರ, 3 ಸೆಪ್ಟೆಂಬರ್ 2008   ( 15:00 IST )
ಮಧ್ವರ ಜನ್ಮಸ್ಥಾನವಾದ ಪಾಜಕದ ಅಭಿವೃದ್ದಿಗೆ ಕಾಣಿಯೂರು ಮಠ ಮುಂದಾಗಿದೆ. ಐತಿಹಾಸಿಕ ಪಾಜಕ ಕ್ಷೇತ್ರವನ್ನು ಧಾರ್ಮಿಕ ಪ್ರವಾಸೀ ತಾಣವನ್ನಾಗಿ ರೂಪಿಸುವುದು ಮಠದ ಉದ್ದೇಶ ಎಂದು ಕಾಣಿಯೂರು ಮಠದ ಪರಮಪೂಜ್ಯ ಶ್ರೀಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಧಾರ್ಮಿಕ ಆಚರಣೆಗಳ ನೆಲೆವೀಡಾಗಿ ಇಂದು ಉಡುಪಿ ಪ್ರಸಿದ್ದಿ ಪಡೆದಿದೆ. ಈ ಅಭಿವೃದ್ದಿಯ ಹಿಂದೆ ಅನೇಕ ಮಂದಿಯ ಶ್ರದ್ದೆಯಿದೆ. ನಾಡಿಗೆ ದ್ವೈತ ಸಿದ್ದಾಂತವನ್ನು ಸಾರಿದ ಮಧ್ವರ ಜನ್ಮಸ್ಥಳ ಉಡುಪಿ ಬಳಿ ಇರುವ ಪಾಜಕದಲ್ಲಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆ. ಇಂದು ಈ ಪುಣ್ಯಕ್ಷೇತ್ರ ಅನೇಕ ಧಾರ್ಮಿಕ ಆಚರಣೆಗಳ ತವರಾಗಿ ರೂಪುಗೊಳ್ಳಲು ಸಮರೋಪಾದಿಯಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ. ವಿವಿಧೆಡೆಗಳಿಂದ ದಿನನಿತ್ಯಲೂ ಅನೇಕ ಮಂದಿ ಈ ಪುಣ್ಯಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.


ಪಾಜಕದಲ್ಲಿ ಈಗೇನಿದೆ?

ಪಾಜಕ ಹಲವು ಕುತೂಹಲಕರ ಅಂಶಗಳಿಗೆ ಕಾರಣವಾಗಿದೆ. ಆಚಾರ್ಯ ಮಧ್ವರ ಬಾಲಲೀಲೆಗಳ ಪ್ರತೀಕವಾಗಿ ಇಂದು ಹಲವಾರು ಸ್ಮಾರಕಗಳನ್ನು ಪಾಜಕದಲ್ಲಿ ನಾವು ಕಾಣಬಹುದು. ಆಚಾರ್ಯರ ಪಾದ ಚಿಹ್ನೆ, ಅಕ್ಷರಾಭ್ಯಾಸ ಮಾಡಿದ ಶಿಲೆ, ಹಾಲು ಮತ್ತು ಮೊಸರಿನ ಪಾತ್ರೆಗಳ ಮೇಲೆ ಇಟ್ಟ ದೊಡ್ಡ ಕಲ್ಲಿನ ಚಪ್ಪಡಿಗಳು ಹಾಗೂ ಮಣಿವಂತ ಎಂಬ ದೈತ್ಯನನ್ನು ಕಾಲ ಕಿರುಬೆರಳಿನಿಂದ ಸಂಹಾರ ಮಾಡಿದ ಸ್ಥಳ ಇತ್ಯಾದಿಗಳನ್ನು ಪಾಜಕದಲ್ಲಿ ಕಾಣಬಹುದು.

ಮಧ್ವರ ಈ ಪುಣ್ಯ ಸ್ಮರಣಿಕೆಗಳನ್ನು ಮುಂದಿನ ಪೀಳಿಗೆ ಕೂಡಾ ನೊಡುವಂತಾಗಬೇಕೆಂಬ ಉದ್ದೇಶದಿಂದ ಅದನ್ನು ಕಾಯ್ದುಕೊಂಡು ಬರುವ ಜವಾಬ್ದಾರಿಯನ್ನು ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಕಾಣಿಯೂರು ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೊತ್ತುಕೊಂಡಿದ್ದಾರೆ. ಇವುಗಳ ರಕ್ಷಣೆಗೆ ಬದ್ಧರಾಗಿರುವ ಇವರು ಆಚಾರ್ಯ ಮಧ್ವರ ಮನೆ ಹಾಗೂ ಪಾದ ಚಿಹ್ನೆ ಇರುವ ಗುಂಡಿಗಳ ನವೀಕರಣವನ್ನು ಅನೇಕ ಬಾರಿ ಭಕ್ತರ ನೆರವಿನಿಂದ ಮಾಡಿದ್ದಾರೆ.

ಪಾಜಕ ಕ್ಷೇತ್ರದಲ್ಲಿ ಪ್ರಾಚೀನ ಗುರುಕುಲ ಮಾದರಿಯ ಪಾಠಶಾಲೆ ಇರಬೇಕೆಂದು ಮನಗಂಡ ಶ್ರೀಪಾದರು 'ಆನಂದತೀರ್ಥ ಗುರುಕುಲ' ಪಾಠಶಾಲೆಯನ್ನು ಆರಂಭಿಸುವ ಮೂಲಕ ಅನೇಕ ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುತ್ತಿದ್ದಾರೆ. ಇಲ್ಲಿನ ಮೂಲಭೂತ ಸೌಕರ್ಯಗಳು ಅಭಿವೃದ್ದಿಯಾಗಿ ಸದಾ ಧಾರ್ಮಿಕ ಚಟಿವಟಿಕೆಗಳು ನಡೆಯುತ್ತಿರುವ ಒಂದು ಕೇಂದ್ರವಾಗಬೇಕೆಂದು ಶ್ರೀಪಾದರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಪೂಜಾ ಮಂದಿರದ ನವೀಕರಣ, ಗೋಶಾಲೆ, ಪಾಕಶಾಲೆ ತುಲಸೀವನ ಯಾಗಶಾಲೆಗಳು ಇನ್ನೂ ನಿರ್ಮಾಣವಾಗಬೇಕಷ್ಟೇ. ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದೊಂದಿಗೆ ಇವೆಲ್ಲವನ್ನೂ ಕೂಡಾ ಶ್ರೀಪಾದರು ನಿರ್ಮಿಸಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೆ.5-6: ಜಾಗತಿಕ ಆನಿಮೇಷನ್ ಮಹಾಸಮ್ಮೇಳನ
ಕೆಪಿಸಿಸಿ ಅಧ್ಯಕ್ಷಗಿರಿ: ಬಿರುಸುಗೊಂಡ ಲಾಬಿ
ಮಳೆಯ ಆರ್ಭಟ: ಕಟ್ಟಡ ಕುಸಿದು 2 ಸಾವು
ಕಿಲ್ಲರ್ ಬಿಎಂಟಿಸಿಗೆ ಇನ್ನೋರ್ವ ಬಲಿ
ಮುಂದುವರಿದ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
ಹೊಗೇನಕಲ್ ಯೋಜನೆಗೆ ಬೆಂಬಲಿಸಲು ರಾಮದಾಸ್ ಕರೆ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ನೂರು ದಿನದಲ್ಲಿ ಸಾವಿರ ತಪ್ಪು: ಖರ್ಗೆ ಕಿಡಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನದ ಆಡಳಿತದಲ್ಲಿ ಸಾವಿರ ತಪ್ಪುಗಳನ್ನು ಎಸಗಿದೆ...
ಮುಂದುವರಿದ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
ಆರೋಪಿ ಅತುಲ್‌ಗೆ ಹೈಕೋರ್ಟ್ ಜಾಮೀನು
ಮನರಂಜನೆ
ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್.
ಮುಂದೆ ಓದಿ|ಮತ್ತಷ್ಟು...